ಬೆಂಗಳೂರು : ಲಾಲ್ ಬಾಗ್ ನಲ್ಲಿ ಫಲ-ಪುಷ್ಪ ಪ್ರದರ್ಶನದ ಸಂಭ್ರಮ ಮನೆ ಮಾಡಿದೆ. ಸಾವಿರಾರು ಮಂದಿ ಬಂದು ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಅದರಲ್ಲೂ ಮಕ್ಕಳು ಮತ್ತು ಹಿರಿಯರು ತಮ್ಮ ನೆಚ್ಚಿನ ನಟ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಪುತ್ಥಳಿ ಮತ್ತು ಪುಷ್ಪ ಅಲಂಕಾರವನ್ನು ನೋಡಲು ಮುಗಿಬಿದ್ದು ಬರುತ್ತಿದ್ದಾರೆ.
ಅದರಲ್ಲೂ ಮಕ್ಕಳು ತಮ್ಮ ನೆಚ್ಚಿನ ನಟ ಅಪ್ಪು ನೋಡಲು ಅತ್ಯಂತ ಉತ್ಸುಕತೆಯಿಂದ ಆಗಮಿಸುತ್ತಿದ್ದಾರೆ. ಮಕ್ಕಳು ಹಿರಿಯರು ಅಪ್ಪು ಪುನೀತ್ ರಾಜಕುಮಾರ್ ಪುತ್ಥಳಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಮೂಲೆ ಮೂಲೆಗಳಿಂದ ಅಪ್ಪು ಅಭಿಮಾನಿಗಳು ಈ ಬಾರಿಯ ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ನೋಡಲು ಬರುತ್ತಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಹುಟ್ಟಿನಿಂದ ಸಾವಿನವರೆಗೂ ಮಾಡಿರುವ ಸಾಧನೆಗಳನ್ನು ಚಿತ್ರಗಳ ಮೂಲಕ ಬರೆದಿಡಲಾಗಿದೆ. ಒಟ್ಟಾರೆಯಲ್ಲಿ ಶೋ ನಲ್ಲಿ ಮಕ್ಕಳು ಫುಲ್ ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಒಟ್ಟಾರೆಯಲ್ಲಿ ಎರಡು ವರ್ಷಗಳ ನಂತರ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಕಂಡು ಜನ ಖುಷಿಯಾಗಿದ್ದಾರೆ. ನೀವು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ಎಂಜಾಯ್ ಮಾಡಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
05/08/2022 09:18 pm