ಬೆಂಗಳೂರು: ಇಲ್ಲಿನ ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ , ಜೇಮ್ಸ್ ಚಿತ್ರದ ಜಾತ್ರೆ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಅನ್ನದಾನ ನಡೆಯುತ್ತಿದೆ.. ಏರಿಯಾ ತುಂಬಾ ಫ್ಲವರ್ ಡೆಕೊರೇಶನ್ ಮಾಡಿ ಅಪ್ಪು ಹುಟ್ಟು ಹಬ್ಬವನ್ನ ಜಾತ್ರೆಯಾಗಿ ಆಚರಣೆ ಮಾಡುತ್ತಿದ್ದಾರೆ..
ಒಂದು ಕಡೆ ಚಿತ್ರಮಂದಿರದ ಹೆಸರೇ ಕಾಣದ ಹಾಗೆ ಅಪ್ಪುವಿನ ಪೋಸ್ಟರ್ ಗಳಿದ್ರೆ, ಮತ್ತೊಂದು ಕಡೆ ಏರಿಯಾ ಪೂರ್ತಿ ಅಪ್ಪು ಚಿತ್ರದಿಂದ ಪ್ರಾರಂಭವಾಗಿ, ಜೇಮ್ಸ್ ಚಿತ್ರದ ವರೆಗೂ ಪೋಸ್ಟರ್ ಗಳನ್ನ ಹಾಕಿದ್ದಾರೆ.. ಅಪ್ಪು ಪೋಸ್ಟರ್ ನ ದೇವರ ತರ ಮೆರವಣಿಗೆ ಮಾಡಿ ಡೋಲು ತಮಟೆಯೊಂದಿಗೆ ತಲೆ ಮೇಲೆ ಹೊತ್ತು, ಕುಣಿದು, ಜೈಕಾರ ಹಾಕುತ್ತಾ ಅಪ್ಪು ಬಾಯ್ಸ್ ಸಂಭ್ರಮಿಸುತ್ತಿದ್ದಾರೆ.. ನಂತರ ಮಕ್ಕಳು ಪೆರೇಡ್ ಕೂಡಾ ನಡೆಸಿದ್ರು. ಹಾಗೇ ಚಿತ್ರ ಮಂದಿರವೂ ಹೌಸ್ ಫುಲ್ ಆಗಿದ್ದು, ಟಿಕೇಟ್ ಸಿಗದೆ ಹಲವು ಅಭಿಮಾನಿಗಳು ಪರದಾಡುವಂತಾಗಿದೆ..
ಇನ್ನು ಆಟೋ ಚಾಲಕರು ಕೂಡಾ ಆಟೋದಲ್ಲಿ ಅಪ್ಪುವಿನ ಭಾವ ಚಿತ್ರ ಇಟ್ಟು ಅಭಿಮಾನ ಮೆರೆದಿದ್ದಾರೆ..ಈ ಬಗ್ಗೆ ನಮ್ಮ ರಿಪೋರ್ಟರ್ ರಂಜಿತ ನಡೆಸಿದ ಚಿಟ್ಚಾಟ್ ಇಲ್ಲಿದೆ ನೋಡಿ.
PublicNext
17/03/2022 07:15 pm