ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊವೀಡ್ ಗೆ ಕೇರ್ ಸೆಂಟರ್ ಗಳೆಷ್ಟು...? ಎಷ್ಟು ಆಸ್ಪತ್ರೆ ಗಳಲ್ಲಿ ಬೆಡ್ ಖಾಲಿ ಇವೆ....?

ವರದಿ - ಗಣೇಶ್ ಹೆಗಡೆ

ಬೆಂಗಳೂರು - ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲೂ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದು, ಮೂರನೇ ಅಲೆಯಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ..

ಈ ಹಿಂದೆ ಕೋವಿಡ್​ ಎರಡನೇ ಅಲೆ ಸೋಂಕು ಹರಡುವಿಕೆ ಹೆಚ್ಚಾಗಿ ರೋಗಿಗಳಿಗೆ ಹಾಸಿಗೆ ಸಮಸ್ಯೆಯಿಂದ ಹಿಡಿದು ಔಷಧಿಯತನಕ ಎಲ್ಲದರ ಕೊರತೆ ಉಂಟಾಗಿತ್ತು. ಪರಿಣಾಮ ಹೆಚ್ಚು ಸಾವು ನೋವು ಅನುಭವಿಸಬೇಕಾಯಿತು. ಇದೀಗ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಹತ್ತು ಪಟ್ಟು ಹೆಚ್ಚು ಸೋಂಕು ಹರಡುತ್ತಿದೆ. ಸೋಂಕಿತರ ಸಂಖ್ಯೆ ಬೆಂಗಳೂರು ಒಂದರಲ್ಲೇ 90 ಸಾವಿರಕ್ಕೂ ಅಧಿಕ ಇದ್ದು, ಭಾಗಶಃ ರೋಗಿಗಳು ಹೋಂ ಐಸೋಲೇಷನ್​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗಾಗಿಯೇ 4 ಸರ್ಕಾರಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಆಸ್ಪತ್ರೆ ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು, 26 ಖಾಸಗಿ ಆಸ್ಪತ್ರೆ ಸೇರಿದಂತೆ 2 ಕೋವಿಡ್ ಕೇರ್ ಸೆಂಟರ್​ಗಳನ್ನು ನಿಯೋಜಿಸಲಾಗಿದೆ. ಜನರಲ್ ಬೆಡ್, ಹೆಚ್​ಡಿಯು, ಐಸಿಯು, ಐಸಿಯು ವಿಥ್ ವೆಂಟಿಲೇಟರ್ ಎಲ್ಲ ಸೇರಿ 6,518 ಬೆಡ್​ಗಳ ವ್ಯವಸ್ಥೆಯಿದೆ.

ಸೌಲಭ್ಯ ಇರುವ ಆಸ್ಪತ್ರೆ

ಲಭ್ಯ ಬಳಕೆ ಖಾಲಿ

ಸರ್ಕಾರಿ ಮೆಡಿಕಲ್ ಕಾಲೇಜು

435. 113 322

ಸರ್ಕಾರಿ ಆಸ್ಪತ್ರೆ

1,083 193. 890

ಖಾಸಗಿ ಮೆಡಿಕಲ್ ಕಾಲೇಜು 3,477 23 3,454

ಖಾಸಗಿ ಆಸ್ಪತ್ರೆ

1,433 20 1,413

ಕೋವಿಡ್ ಕೇರ್ ಸೆಂಟರ್

90 52 38

ಸದ್ಯದ ಅಂಕಿಅಂಶಗಳ ಪ್ರಕಾರ, ಜನರಲ್ ಬೆಡ್​ನಲ್ಲಿ 197 ಸೋಂಕಿತರು ಇದ್ದರೆ, ಹೆಚ್​ಡಿಯು 143, ಐಸಿಯುನಲ್ಲಿ 43, ಐಸಿಯು ವಿಥ್ ವೆಂಟಿಲೇಟರ್​ನಲ್ಲಿ 18 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಹೆಚ್ಚಿನವರು ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

15/01/2022 01:01 pm

Cinque Terre

624

Cinque Terre

0