ಯಲಹಂಕ: ಪ್ಲಾಸ್ಟಿಕ್ ನ ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಪ್ಲಾಸ್ಟಿಕ್ ಬಳಕೆ ನಮ್ಮ ಸುತ್ತಾಮುತ್ತಾ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.
ಸದ್ಯ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಬರುವ ಮತ್ತು ಹೋಗುವ ಜನ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯವಾಗ್ತಿದೆ.
ಇದರ ತಡೆಗೆ ಮಹಿಳೆ ವಿನೂತನ ಪ್ರಯತ್ನವೆಂಬಂತೆ, ಹಳೆ ಬಟ್ಟೆ ತನ್ನಿ, ಉಚಿತವಾಗಿ ಹೊಸ ಬಟ್ಟೆಬ್ಯಾಗ್ ಪಡೆಯಿರಿ ಎಂಬ ಕಾಳಜಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗೆಗಿನ ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
PublicNext
07/08/2022 04:31 pm