ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನಲೆ , ಎಲ್ಲೆಲ್ಲೂ ಹಿಂದೂಗಳು ಹಲಾಲ್ ಕಟ್ ಮಾಂಸವನ್ನ ತಿನ್ನಬಾರದು, ಹಿಂದೂಗಳ ದೇವ್ರಿಗೆ ಹಲಾಲ್ ಮಾಡಿದ ಮಾಂಸವನ್ನ ಎಡೆ ಇಡಬಾರದು ಎಂದು ಬೃಹತ್ ಮಟ್ಟಕ್ಕೆ ಸುದ್ದಿಯಾಗಿತ್ತು.. ಹೀಗಾಗಿ ಹಲಾಲ್ ಕಟ್ ಮಾಂಸ ಬೇಡ. ನಾವೇ ಜಟ್ಕಾ ಕಟ್ ಮಾಂಸ ತಿನ್ನೋಣ ಎಂದು ಅಭಿಯಾನ ಪ್ರಾರಂಭಿಸಿದ್ದರು. ಇದರ ಬೆನ್ನಲ್ಲೇ ಹಲಾಲ್ ಬಹಿಷ್ಕಾರ ಅಭಿಯಾನದ ಹಿನ್ನೆಲೆಯಲ್ಲಿ ಹಿಂದವೀ ಮಾರ್ಟ್ ಗಳಲ್ಲಿ ಭರ್ಜರಿ ವ್ಯಾಪಾರ ಆಗಿದೆ.
ರಾಜಧಾನಿಯ ಹಿಂದವೀ ಮಾರ್ಟ್‌ಗಳಲ್ಲಿ ಲಕ್ಷ ಲಕ್ಷ ವ್ಯಾಪಾರವಾಗಿದೆ. ಎಂಟು ಹಿಂದವೀ ಮಾರ್ಟ್‌ನಿಂದ ಬರೋಬ್ಬರಿ- 43 ಲಕ್ಷ ರುಪಾಯಿ ವ್ಯಾಪಾರವಾಗಿದೆ.. ಬೆಂಗಳೂರಿನ ಜಟ್ಕಾ ಕಟ್ ಅಂಗಡಿಗಳಲ್ಲಿ ನಿನ್ನೆ ಒಂದೇ ದಿನ ಸುಮಾರು 7 ಕೋಟಿ ರುಪಾಯಿ ವ್ಯಾಪಾರವಾಗಿದೆ. ಜಟ್ಕಾ ಕಟ್ ವ್ಯಾಪಾರಿಗಳು ಡೋರ್ ಡಿಲೆವೆರಿ ನೀಡಿದ್ದಾರೆ. ಈ ಹಿನ್ನಲೆ ಅಂಗಡಿಗಳ ವ್ಯಾಪಾರ ನೋಡೋದಾದ್ರೆ,
ಉಳ್ಳಾಲ ಮತ್ತು ಜ್ಞಾನಭಾರತಿ ಹಿಂದವೀ ಮೀಟ್ ಮಾರ್ಟ್ ನಲ್ಲಿ
3000 ಕೆಜಿ- ಮಟನ್
950 ಕೆಜಿ- ಚಿಕನ್
ಅಂದಾಜು ಮೊತ್ತ- 21 ಲಕ್ಷದ 71 ಸಾವಿರ ರುಪಾಯಿ ವ್ಯಾಪಾರ ಆಗಿದೆ..
( 180 ರಿಂದ 200 ರುಪಾಯಿ ಕೆಜಿ ಚಿಕನ್. 700 ರಿಂದ 750 ರುಪಾಯಿ ಮಟನ್)
ಕಮ್ಮನಹಳ್ಳಿ ಹಿಂದವೀ ಮೀಟ್ ಮಾರ್ಟ್ ನಲ್ಲಿ
750 ಕೆಜಿ- ಮಟನ್
600 ಕೆಜಿ - ಚಿಕನ್
ಇದರ ಅಂದಾಜು ಮೊತ್ತ- 6 ಲಕ್ಷದ 33 ಸಾವಿರ ರುಪಾಯಿ..
ಇಂದಿರಾನಗರದ ಹಿಂದವೀ ಮೀಟ್ ಮಾರ್ಟ್
400 ಕೆಜಿ - ಮಟನ್
500 ಕೆಜಿ - ಮಟನ್
ಇದರ ಅಂದಾಜು ಮೊತ್ತ- 3 ಲಕ್ಷದ 70 ಸಾವಿರ ರುಪಾಯಿ..
ಹೊರಮಾವು
300 ಕೆಜಿ- ಮಟನ್
400 ಕೆಜಿ - ಚಿಕನ್
ಇದರ ಅಂದಾಜು ಮೊತ್ತ- 2 ಲಕ್ಷದ 82 ಸಾವಿರ ರುಪಾಯಿ.
ನಾಗವಾರ
400 ಕೆಜಿ-ಮಟನ್
ಅಂದಾಜು ಮೊತ್ತ-2 ಲಕ್ಷದ 80 ಸಾವಿರ ರುಪಾಯಿ.
ಬನ್ನೇರುಘಟ್ಟ
300 ಕೆಜಿ- ಮಟನ್( ಚಿಕನ್ ಇಲ್ಲ).
ಇದರ ಅಂದಾಜು ಮೊತ್ತ-2 ಲಕ್ಷದ ಹತ್ತು ಸಾವಿರ
ನೆಲಗದರನಗಳ್ಳಿ
300 ಕೆಜಿ- ಮಟನ್
360 ಕೆಜಿ- ಚಿಕನ್
ಅಂದಾಜು ಮೊತ್ತ- 2 ಲಕ್ಷದ 74 ಸಾವಿರ ರೂಪಾಯಿಗಳು.
ಒಟ್ಟಾರೆ ಎಂಟು ಹಿಂದವೀ ಮೀಟ್ ಮಾರ್ಟ್ ನಲ್ಲಿ ನಿನ್ನೆ ಆದ ಅಂದಾಜು ವ್ಯಾಪಾರದ ಮೊತ್ತ- 43,20,800 ಆಗಿದ್ದು, ಝಟ್ಕಾ ಕಟ್ ವ್ಯಾಪಾರಿಗಳು ಭರ್ಜರಿ ಲಾಭಗಳಿಸಿದ್ದಾರೆ..
ರಂಜಿತ ಸುನಿಲ್ ಮೆಟ್ರೊ ಬ್ಯೂರೊ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
04/04/2022 04:14 pm