ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಸಿ ಮನೆಗೆ ತಲುಪಿಸುವ ಸೇವೆ ಸ್ಥಗಿತಗೊಳಿಸಿದ ಡಂಜೊ..!

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸರಕುಗಳನ್ನು ಸರಬರಾಜು ಮಾಡಲಾಗದೆ ಆಪ್‌ ಆಧಾರಿತ ದಿನಸಿ ವಿತರಣಾ ಇ ಕಾಮರ್ಸ್‌ ಸಂಸ್ಥೆ ಡಂಜೋ ನಗರದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಅದರ ಬಳಕೆದಾರರು ಹೇಳಿದ್ದಾರೆ.

ಬೆಂಗಳೂರಿನ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಕೆಲವು ಭಾಗಗಳು ಜಲಾವೃತವಾಗಿದ್ದು, ನಗರದ ನಿವಾಸಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಪೋಸ್ಟ್‌ಗಳಲ್ಲಿ ದಿನಸಿ ವಿತರಣಾ ಆಪ್‌ ಡಂಜೋ ತನ್ನ ಸೇವೆ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ. ರಿಲಯನ್ಸ್‌ ಸಂಸ್ಥೆಯ ಪಾಲುದಾರ ಈ ಕಾಮರ್ಸ್‌ ಸಂಸ್ಥೆಯಾಗಿರುವ ಡಂಜೋ 19 ನಿಮಿಷಗಳಲ್ಲಿ ದಿನಬಳಕೆಯ ವಸ್ತುಗಳನ್ನು ತಲುಪಿಸುತ್ತದೆ. ಈ ಸೇವೆಯು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಬುಧವಾರದಿಂದ ಡಂಜೊ ತನ್ನ ಸೇವೆ ಕಡಿಮೆಗೊಳಿಸಿದೆ. ಅವರು ಆದೇಶಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪ್ರಸಿದ್ಧ ಕಂಪನಿಯ ಉದ್ಯೋಗಿಯೊಬ್ಬರು ಹೇಳಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ. ಬೆಂಗಳೂರಿನ ಬಳಕೆದಾರರ ಕೆಲವರು ಸಾಮಾಜಿಕ ಮಾಧ್ಯಮ ಖಾತೆಗಳು ಡಂಜೋ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಡಂಜೊ ಡೈಲಿ ಸ್ವಲ್ಪ ಸಮಯದ ನಂತರ ಹಿಂತಿರುಗುತ್ತದೆ ಎಂದು ನಮೂದಿಸಲಾಗಿದೆ.

ಆದರೆ ಡಂಜೋ ವಕ್ತಾರರು ಹೇಳಿಕೆ ಪ್ರಕಾರ, "ನಮ್ಮ ವಿತರಣಾ ಪಾಲುದಾರರು ಬೆಂಗಳೂರು ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಹಾನಿಯಿಂದಾಗಿ ವಿಳಂಬವಾಗುತ್ತಿದೆ. ಅವರ ಸುರಕ್ಷತೆಯ ಹಿನ್ನೆಲೆಯಲ್ಲಿ ನಾವು ಅತಿಯಾದ ನೀರು ತುಂಬಿರುವ ಪ್ರದೇಶಗಳಲ್ಲಿ ವಿತರಣೆ ಸೇವೆಯನ್ನು ತಕ್ಕಮಟ್ಟಿಗೆ ನಿಲ್ಲಿಸಿದ್ದೇವೆ. ಮಳೆಯಿಂದಾಗಿ ಆರ್ಡರ್‌ಗಳು ವಿಳಂಬವಾಗುತ್ತಿದೆ. ಹೀಗಾಗಿ ಕಂಪನಿಯು ತನ್ನ ಗ್ರಾಹಕರಿಗೆ ಮಾಹಿತಿಯನ್ನು ನೀಡಿದೆ. ನಾವು ನಮ್ಮ ಡೆಲಿವರಿ ಪಾಲುದಾರರ ಸುರಕ್ಷತೆಗೆ ಆದ್ಯತೆ ನೀಡುತ್ತವೆ," ಎಂದು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

27/09/2022 08:47 pm

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ