ಬೆಂಗಳೂರು: ದರ ಏರಿಕೆ ಸಮಸ್ಯೆಯಿಂದ ನರಳುತ್ತಿರುವ ದೇಶದ ಜನತೆಗೆ ಭಾನುವಾರ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನಿನ್ನೆಯಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನ 102.50 ರೂ. ಹೆಚ್ಚಿಸಲಾಗಿದೆ. ಹೀಗಾಗಿ 19 ಕೆ.ಜಿ ಸಿಲಿಂಡರ್ ಬೆಲೆ 2355.50 ರೂ ಗೆ ಏರಿಕೆ ಕಂಡಿದೆ.
ಈ ಹಿಂದೆ ಮಾರ್ಚ್1 ಹಾಗೂ ಏಪ್ರಿಲ್ 1 ರಂದು ಕೂಡಾ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಕ್ರಮವಾಗಿ 250 ರೂ. ಹಾಗೂ 105 ರೂ.ಗೆ ಹೆಚ್ಚಿಸಲಾಗಿತ್ತು. ಇದರಿಂದ ಕೇವಲ 3 ತಿಂಗಳಲ್ಲಿ ಬರೋಬ್ಬರಿ 460 ರೂ ಹೆಚ್ಚಳ ಮಾಡಿದಂತಾಗಿದೆ. ಇನ್ನೂ ಹೊಟೇಲ್ ದರ ಕೂಡಾ ಈ ಮೂಲಕ ಮತ್ತಷ್ಟು ತುಟ್ಟಿಯಾಗುವ ಸಂಭವ ಇದೆ. ಅಡಿಗೆ ಎಣ್ಣೆ ಹಾಗೂ ವಾಣಿಜ್ಯ ಎಲ್‌ಪಿಜಿ ಅವಂಬಿಸುವ ಹೊಟೇಲ್ ಖಾದ್ಯಗಳ ಬೆಲೆ ಮತ್ತಷ್ಟು ಹೆಚ್ಚಳ ವಾಗುವ ಸಾಧ್ಯತೆ ಇದೆ.
PublicNext
02/05/2022 06:19 pm