ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜಯದಶಮಿ ಹಬ್ಬದ ಹಿನ್ನೆಲೆ ಬಯಲು ಬಸವಣ್ಣ ದೇವಾಲಯದಲ್ಲಿ ಜಾತ್ರಾ ಮಹೋತ್ಸವ

ಬೆಂಗಳೂರು: ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಯಲು ಬಸವಣ್ಣ ದೇವಸ್ಥಾನದಲ್ಲಿ ಇಂದು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇನ್ನು ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆಯುತ್ತಿದ್ದರು. ಅಲ್ಲದೆ ಶ್ರದ್ಧಾಭಕ್ತಿಯಿಂದ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಡಗರ ಸಂಭ್ರಮಣದಿಂದ ಆಚರಣೆ ಮಾಡಲಾಯಿತು. ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಯಿತು. ಇನ್ನು ಮಹಿಳೆಯರು ಸಾಂಪ್ರದಾಯಿಕ ಊಡಗೆಗಗಳನ್ನು ತೊಟ್ಟು ವಿಶೇಷವಾಗಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ವಿಶೇಷವಾಗಿ ಮಹಿಳೆಯರಿಂದ ಕೋಲಾಟ ಹಾಡುವುದರ ಮೂಲಕ ಕಾರ್ಯಕ್ರಮ ಇನ್ನಷ್ಟು ಮೆರಗುತರಂತೆ ಮಾಡಿತು. ಇನ್ನು ಇದೇ ವೇಳೆ ಮಾತನಾಡಿದ ಸೇವಕರ್ತ ಮಂಜುನಾಥ್ ಮಾತನಾಡಿ ನಮ್ಮ ಚಿಕ್ಕ ವಯಸ್ಸಿನಲ್ಲಿ ಹಸುಗಳಿಗೆ ಏನಾದ್ರು ಕಾಯಿಲೆ ಬಂದರೆ ಇಲ್ಲಿ ಮುಡಿ ಕಟ್ಕೊಂಡಿದ್ರೆ ಕಾಯಿಲೆ ವಾಸಿಯಾಗ್ತಿತ್ತು. ಕಣ್ಣಾರೆ ನಾನು ಕೂಡ ಕಂಡಿದ್ದೇನೆ ಇದು ನಂಬಿಕೆ ಇರುವಂತಹ ದೇವಸ್ಥಾನ ಹೀಗಾಗಿ ಬರುವಂತಹ ಭಕ್ತಾದಿಗಳಿಗೆ ನಮ್ ಕೈಲಾದ ಸುಮಾರು 20 ರಿಂದ 50,000 ಜನಕ್ಕೆ ಊಟದ ವ್ಯವಸ್ಥೆಯನ್ನ ಮಾಡಿಕೊಟ್ಟಿದ್ದೇನೆ. ಬಿಜೆಪಿಯ ಪ್ರಬಲ ಆಕಾಂಕ್ಷಿ ಎಂಬ ಮಾದ್ಯಮ ಪ್ರಶ್ನೆಗೆ. ನನ್ನ ಗಾಡ್ ಫಾದರ್ ಬಿಜೆಪಿನೇ. ನಾನು ಕೂಡ ಹುಟ್ಟು ಬಿಳ್ತಿರೋದು ನೇರ ಪಂಚಾಯಿತಿ ವ್ಯಾಪ್ತಿಯ ಜಂಟಿಗನಹಳ್ಳಿಯಲ್ಲಿ ಯುವ ಮೋರ್ಚಾ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಾನು ಸಹ ಇಲ್ಲೆ ಹುಟ್ಟು ಬೆಳೆದಿರುವನು. ಹಾಗಾಗಿ ಸಹಜವಾಗಿ ಬಿಜೆಪಿಯಿಂದ ಕೆಲಸ ಮಾಡುವುದರಿಂದ ಅವಕಾಶ ನನಗೂ ಸಿಗಬಹುದಾ? ಎಂಬ ಕಾರಣದಿಂದಾಗಿ ನಾನು ಕೂಡ ಆಕಾಂಕ್ಷಿಯಾಗಿ ಹೋರಾಡುತ್ತಿದ್ದಾನೆ ಎಂದು ತಿಳಿಸಿದರು.

Edited By : Nagesh Gaonkar
PublicNext

PublicNext

05/10/2022 04:14 pm

Cinque Terre

24.4 K

Cinque Terre

0

ಸಂಬಂಧಿತ ಸುದ್ದಿ