ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಕಳಪೆ ಸಾಧನೆ:ಮೋಹನದಾಸ ಪೈ ಕಿಡಿ

ಬೆಂಗಳೂರು: ಕೇಂದ್ರದ ಸ್ಚಚ್ಛ ಸರ್ವೇಕ್ಷಣಾ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರು ನಗರ ಕಳಪೆ ಸಾಧನೆ ಮಾಡಿದೆ. 45 ನಗರಗಳ ಪಟ್ಟಿಯಲ್ಲಿ ಬೆಂಗಳೂರು 42ನೇ ಸ್ಥಾನ ಪಡೆದಿದೆ. ಪ್ರತಿಬಾರಿ ಸ್ವಚ್ಛತಾ ವಿಚಾರದಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿದೆ. ಇದು ಅತಿದೊಡ್ಡ ನಾಚಿಕೆಗೇಡು ಎಂದು ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೇಶದ ಏಕೈಕ ಗ್ಲೋಬಲ್ ಸಿಟಿ. ದೇಶದ ಅತಿ ಶ್ರೀಮಂತ ಸಿಟಿ, ಈಗ ಗಾರ್ಬೇಜ್ ಸಿಟಿಯಾಗಿದೆ. ಇದು ನಮಗೆಲ್ಲ ನಾಚಿಕೆಗೇಡು ಸಂಗತಿ. ನಮಗೆ ತುರ್ತು ಸುಧಾರಣೆ ಬೇಕೆಂದು ಹೇಳಿರುವುದಲ್ಲದೆ, ತಕ್ಷಣ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿ, ಬಿ.ಎಲ್. ಸಂತೋಷ್, ಫ್ರಧಾನಿ ಕಚೇರಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲಿ ಹೆಸರು ಮಾಡಿರುವ ಬೆಂಗಳೂರು ಸ್ವಚ್ಚತೆಯಲ್ಲಿ ಮತ್ತೆ ಹಿಂದುಳಿದಿರುವುದು ಸಾಬೀತಾಗಿದ್ದು ದೇಶದ 45 ನಗರಗಳಲ್ಲಿ 43ನೇ ಸ್ಥಾನಕ್ಕೆ ಹೋಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 15 ರ‍್ಯಾಂಕಿಂಗ್ ಕುಸಿದಿದೆ. ಕಳೆದ ವರ್ಷ 28 ನೇ ರ‍್ಯಾಂಕ್‌ನಲ್ಲಿತ್ತು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿಅಂಶಗಳನ್ನು ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ 43 ನೇ ಸ್ಥಾನದಲ್ಲಿದೆ. ಸ್ವಚ್ಚತಾ ನಗರಗಳ ಪೈಕಿ ಉತ್ತಮ ರ‍್ಯಾಂಕ್ ಗಳಿಸಲು ಬೆಂಗಳೂರು ಹೆಣಗಾಡುತ್ತಿದೆ.

Edited By : PublicNext Desk
Kshetra Samachara

Kshetra Samachara

03/10/2022 10:13 pm

Cinque Terre

978

Cinque Terre

0