ಹೊಸಕೋಟೆ: ಪೌರಾಢಳಿತ ಸಚಿವ ಎಂಟಿಬಿ. ನಾಗರಾಜ್ ಮತ್ತು ಮಗ ಎಂಟಿಬಿ. ರಾಜೇಶ್ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬುದು ಕಾಂಗ್ರೆಸ್ ಪಕ್ಷದವರ ಪಿತೂರಿ ಎಂದು ಎಂಟಿಬಿ ನಾಗರಾಜ್ ಕಿಡಿಕಾರಿದರು.
ಹೇಗಾದರೂ ಮಾಡಿ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಮತ್ತವರ ಮಗನನ್ನು ಜೊತೆಗೆ ಬಿಜೆಪಿಯನ್ನು ಮುಗಿಸಲು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಪಿತೂರಿ ಎಂದು ಎಂಟಿಬಿ ನಾಗರಾಜ್ ಹೊಸಕೋಟೆಯ ಗುಂಡೂರಿನಲ್ಲಿ ಕಿಡಿಕಾರಿದರು. ಸರ್ಕಾರದಲ್ಲಿ ಕೆಲಸಗಳು ಮತ್ತು ವರ್ಗಾವಣೆ ವಿಚಾರದಲ್ಲಿ ಕುರುಬ ಸಮಾಜದ ಕೆಲಸ ಮಾಡಿಕೊಟ್ಟಿದ್ದಕ್ಕೆ, ಈ ರೀತಿ ಊಹಾಪೋಹದ ಸುದ್ದಿ ಹರಡುತ್ತಿದ್ದಾರೆ. ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ
PublicNext
11/10/2022 10:13 pm