ಮಲೇಶ್ವರಂ: ನಗರದಲ್ಲಿ ಕೆರೆಗಳನ್ನ ಸಮಾಧಿ ಮಾಡಿ ಅದರ ಮೇಲೆ ಬಿಡಿಎ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಶಾಸಕರಿಗೆ, ಸಚಿವರಿಗೆ, ಲೋಕಸಭಾ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿ ಈಗ ಬೀದಿ ನಾಟಕವನ್ನ ಬಿಡಿಎ ಆಡ್ತಿದೆ. ತನ್ನ ತಪ್ಪನ್ನೂ ಮುಚ್ಚಿಕೊಳ್ಳೊದಕ್ಕೆ ಸರ್ಕಾರದ ಕಡೆ ಬೊಟ್ಟು ಮಾಡ್ತಿದೆ.
ಇತ್ತ ಒತ್ತುವರಿ ತೆರವುಗೊಳಿಸಿ ಅಂತ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ ಶಾಸಕರಿಂದಲೇ ಕೆರೆ ಒತ್ತುವರಿಯಲ್ಲಿ ಬೃಹತ್ ಮನೆಗಳು ನಿರ್ಮಾಣವಾಗಿದೆ. ಬೆಂಗಳೂರು ನಗರದ 23 ಕೆರೆಗಳನ್ನ ನೆಲಸಮ ಮಾಡಿ ಬಿಡಿಎ ಲೇಔಟ್ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೇ ಅವುಗಳನ್ನೂ ಕಡಿಮೆ ಬೆಲೆಗೆ ಜನಪ್ರತಿನಿಧಿಗಳಿಗೆ ಹಂಚಿಕೆ ಮಾಡಿದೆ. ಅದರಲ್ಲೂ ಬಿಜೆಪಿ, ಕಾಂಗ್ರೆಸ್ ಶಾಸಕರಿಗೆ ಬಹುಪಾಲು ಹಂಚಿಕೆ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ಸಾಯಿದತ್ತ ಆರೋಪ ಮಾಡಿದ್ದಾರೆ.
Kshetra Samachara
03/10/2022 07:04 pm