ಚಿಕ್ಕಪೇಟೆ: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಟಾಪಟಿ ಅಧ್ಯಕ್ಷರ ಅಂಗಳಕ್ಕೆ ತಲುಪಿದೆ. ಆರ್.ವಿ.ದೇವರಾಜ್ ವರ್ಸಸ್ ಕೆಜಿಎಫ್ ಬಾಬು ಫೈಟ್ ನಡೆಯಿತ್ತಿದ್ದು, ಇದೀಗ ಕೆಜಿಎಫ್ ಬಾಬು ವಿರುದ್ಧ ಆರ್. ವಿ ದೇವರಾಜ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಓಡಾಡುತ್ತಿದ್ದಾನೆ. ಇದರಿಂದ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆರ್.ವಿ.ದೇವರಾಜ್ ದೂರು ನೀಡಿದ್ದಾರೆ. ಹೀಗಾಗಿ ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈಗಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೇನೆ. ಕರೆಸಿ ಮಾತಾಡುತ್ತೇನೆ, ನೀವು ನಿಮ್ಮ ಪಾಡಿಗೆ ಕೆಲಸ ಮಾಡಿ. ಆತನ ಬಗ್ಗೆ ತಲೆಕೆಡಿಸಿಕೊಳ್ಳ ಬೇಡಿ ಎಂದು ಡಿ.ಕೆ ಶಿವಕುಮಾರ್ ಹೇಳಿ ಕಳಿಸಿದ್ದಾರೆ.
Kshetra Samachara
26/09/2022 03:19 pm