ಬೆಂಗಳೂರು: ಪೇ ಸಿಎಂ ಪೋಸ್ಟರ್ ಈಗಾಗಲೇ ರಾಜ್ಯವ್ಯಾಪಿ ಸದ್ದು ಮಾಡ್ತಿದೆ. ಈ ಪೋಸ್ಟರ್ ಅಂಟಿಸದವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೋಸ್ಟರ್ ಅಂಟಿಸಿದ್ದು ನಮ್ಮ ಕಾರ್ಯಕರ್ತರೇ..ನಾಳೆ ಪೋಸ್ಟರ್ ಅಂಟಿಸ್ತೀವಿ ಅಂತ ಡಿಕೆಶಿ ಹೇಳಿಕೆ ನೀಡಿದ್ರು. ಈ ಮಧ್ಯೆ ಕಾಂಗ್ರೆಸ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಶಾಸಕರು ಮತ್ತು ಸಚಿವರಿಗೆ ಅಂಟಿಕೊಂಡಿದ್ದ ಕೆಲ ಭ್ರಷ್ಟಾಚಾರ ಆರೋಪಗಳನ್ನೆ ಶೀರ್ಷಿಕೆ ಮಾಡಿ ಸಿಎಂ ಬೊಮ್ಮಾಯಿ ಇರುವ ಪೇಸಿಎಂ ಕ್ಯೂ ಆರ್ ಕೋಡ್ ಹಿಡಿದು ನಾಯಕರು ಹಣ ಕೇಳುವ ರೀತಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದ್ರ ಜೊತೆಗೆ 'ಡೀಲ್ ನಿಮ್ದು ಕಮಿಷನರ್ ನಮ್ದು' ಅಂತ ಅಡಿಬರವನ್ನೂ ನೀಡಲಾಗಿದೆ.
ಶಾಸಕ ರವಿ ಸುಬ್ರಮಣ್ಯ ರಾಘವೇಂದ್ರ ಬ್ಯಾಂಕ್ ಸ್ಯಾಮ್ ಸಚಿವ ಸುಧಾಕರ್‌ಗೆ ಕೋವಿಡ್ ಸ್ಕ್ಯಾಮ್. ರಾಜ್ಯಸಭಾ ಸದಸ್ಯ ಜಗ್ಗೇಶ್ ವಿದ್ಯಾರ್ಥಿಗಳ ಸ್ವೆಟರ್ ಸ್ಕ್ಯಾಮ್. ಸಚಿವ ಹೆಬ್ಬಾರ್‌ಗೆ ಆಹಾರ ಕಿಟ್ ಸ್ಕ್ಯಾಮ್. ಅಶ್ವತ್ ನಾರಾಯಣ್‌ಗೆ ಪಿಎಸ್‌ಐ ಸ್ಕ್ಯಾಮ್. ಜೊತೆಗೆ ವಿಜಯೇಂದ್ರಗೆ ವಿಜಯೇಂದ್ರ ಸೇವಾ ತೆರಿಗೆ ಸ್ಕ್ಯಾಮ್ ಹೆಸ್ರಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಇನ್ನೂ ಈ ಪೋಸ್ಟರ್‌ಗೆ ಬಿಜೆಪಿ ನಾಯಕರು ಯಾವ ರೀತಿ ಉತ್ತರ ಕೋಡ್ತಾರೆ ಅಂತ ಕಾದು ನೋಡಬೇಕಿದೆ.
PublicNext
23/09/2022 08:53 am