ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗಾಗಿ ಒತ್ತಾಯ : ಶಾಸಕರ ನೇತೃತ್ವದಲ್ಲಿ ಮನವಿ

ದೊಡ್ಡಬಳ್ಳಾಪುರ: ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಬೆಂಗಳೂರಿನಲ್ಲಿರುವ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರನ್ನು ಭೇಟಿ ಮಾಡಿ ಹಕ್ಕುಪತ್ರ ಹಾಗೂ ಮನೆಗಳ ಮೇಲ್ಛಾವಣಿಯ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ವೆಂಕಟರಮಣಯ್ಯ ಇತ್ತೀಚೆಗೆ ಮಳೆ ಹೆಚ್ಚಾಗಿದ್ದು ಮನೆಗಳ ಮೇಲ್ಛಾವಣಿಯ ಸೀಲಿಂಗ್ ಕಿತ್ತು ಬರುತ್ತಿದೆ, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಶೀಘ್ರವೇ ದುರಸ್ಥಿ ಕಾರ್ಯ ಕೈಗೊಳ್ಳಬೇಕು, ಹಕ್ಕುಪತ್ರ ವಿತರಣೆ ಮಾಡಲು ವಿನಾಕಾರಣ ಕಾಲಹರಣ ಮಾಡಿದರೆ ಕಚೇರಿ ಮುಂಭಾಗವೇ ಧರಣಿ ಮಾಡುವ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸ್ಲಂ ಬೋರ್ಡ್ ಆಯುಕ್ತ ವೆಂಕಟೇಶ್ ತಾಲೂಕಿನ ಮಾದಗೊಂಡನಹಳ್ಳಿ ರಸ್ತೆಯ ರಾಜೀವ್‌ ಗಾಂಧಿ ಬಡಾವಣೆಯ ಬಳಿ 2010 ರಲ್ಲಿ ಜೆನರ್ಮ್ ಯೋಜನೆಯಡಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗಿರುವ ಮನೆಗಳ ಫಲಾನುಭವಿಗಳಿಗೆ ಶೀಘ್ರವಾಗಿ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಭರವಸೆ ನೀಡಿದರು.

Edited By : Nirmala Aralikatti
Kshetra Samachara

Kshetra Samachara

19/09/2022 11:01 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ