ವರದಿ- ಬಲರಾಮ್ ವಿ.
ಬೆಂಗಳೂರು: ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನೂತನ ಮಹಿಳಾ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನು ಕೆಪಿಸಿಸಿ ಎಸ್ಸಿ ಘಟಕದ ಉಪಾಧ್ಯಕ್ಷ ನಲ್ಲೂರಹಳ್ಳಿ ನಾಗೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದರು. ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಸ್ಥಾನಮಾನ ನೀಡುವ ಮೂಲಕ ಮಹಿಳೆಯರಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ವೈಟ್ ಫೀಲ್ಡ್ ವಾರ್ಡ್ ನ ಮಹಿಳಾ ಅಧ್ಯಕ್ಷರಾಗಿ ಪೂರ್ಣಿಮಾ ಗೌಡ, ಎಇಸಿಎಸ್ ಲೇಔಟ್ ಮಹಿಳಾ ಅಧ್ಯಕ್ಷರಾಗಿ ಶೋಭಾ, ಮಾರತ್ತಹಳ್ಳಿ ವಾರ್ಡ್ ನ ಅಧ್ಯಕ್ಷರಾಗಿ ರಾಧಾ ರೆಡ್ಡಿ, ದೊಡ್ಡನೆಕ್ಕುಂದಿ ವಾರ್ಡ್ ನ ಅಧ್ಯಕ್ಷರಾಗಿ ಅಕ್ಷಿತಾ ಅವರನ್ನು ನೇಮಿಸಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಮಾರತ್ತಹಳ್ಳಿ ಬ್ಲಾಕ್ ಅಧ್ಯಕ್ಷ ಬಾಬು ಗೌಡ, ರಾಮಾಂಜಿ, ನಾಗರಾಜ್ ಇದ್ದರು.
PublicNext
18/09/2022 08:32 pm