ಬೆಂಗಳೂರು: ಕೋವಿಡ್ ಕಾಲದಲ್ಲಿ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಎಲ್ಲ ಅರ್ಹ ಶಿಕ್ಷಕ ಸಿಬ್ಬಂದಿ ನೇರ ವರ್ಗಾವಣೆಯಾಗಿದ್ದಾರೆ. DBT ಮೂಲಕ 75 ಕೋಟಿ ರೂ.ವನ್ನು ಕೋವಿಡ್ ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ. ಪಾರದರ್ಶಕ ಪಾವತಿ ವ್ಯವಸ್ಥೆ ಎಂದರೆ ನಿಮಗೆ ಅಲರ್ಜಿಯೇ.? ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಬಿಸಿ ನಾಗೇಶ್ ಟ್ವೀಟ್ ವಾರ್ ನಡೆಸಿದ್ದಾರೆ.
ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 2013 ರಿಂದ2017 ರ ವರೆಗೆ ಮಾಸಿಕ 7000 ನೀಡಲಾಗಿದೆ .2017 ರಿಂದ 2021ರ ವರೆಗೆ 9000 ಗೌರವ ಸಂಬಾವನೆ ನೀಡಲಾಗುತ್ತಿತ್ತು. ನಮ್ಮ ಸರಕಾರ ಗೌರವ ಸಂಭಾಷಣೆಯನ್ನು ಪರಿಷ್ಕರಿಸಿ ಈ ಸಾಲಿನಲ್ಲಿ 12000 ಕ್ಕೆ ಹೆಚ್ಚಿಗೆ ಲೆಕ್ಕ ಬರುತ್ತದೆ ಎಂದು ಭಾವಿಸಿದ್ದೇನೆ .ಆರ್ ಟಿಇ ಶುಲ್ಕ ಮರುಪಾವತಿ ವ್ಯವಸ್ಥೆ ಅನ್ ಲೈನ್ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ. 2021-22 ಸಾಲಿನ ಎರಡು ತ್ರೈಮಾಸಿಕ ಅವಧಿಗೆ ಮೀಸಲಾದ ಮೊತ್ತದಲ್ಲಿ ಶಾಲೆಗಳು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ 291 ಕೋಟಿ ಪಾವತಿಸಲಾಗಿದೆ. ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಭೇಟಿ ನೀಡಿ ಪರಿಶೀಲಸಬಹುದೆಂದು ಸರಣಿ ಟ್ವೀಟ್ ಗಳ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಸಿ ನಾಗೇಶ್ ತಿರುಗೇಟು ನೀಡಿದಾರೆ.
PublicNext
14/09/2022 08:33 am