ಬೆಂಗಳೂರು: ಮಲ್ಲೇಶ್ವರಂ ವೈಟ್ ಟಾಪಿಂಗ್ ವಿಳಂಬದಿಂದ ದಿನನಿತ್ಯ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ವೈಟ್ ಟಾಪಿಂಗ್ ವಿಳಂಬಕ್ಕೆ ದಿನನಿತ್ಯ ಟ್ರಾಫಿಕ್ ಉಂಟಾಗುತ್ತಿದ್ದು ಇದರಿಂದ ಜನರು ದಿನನಿತ್ಯ ಟ್ರಾಫಿಕ್‌ನಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮತ್ತು ಸಾರ್ವಜನಿಕರಿಗೆ ರಸ್ತೆ ದಾಟಲೂ ಪರದಾಟ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.
ಸಂಪಿಗೆ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಇರುವ ಹಿನ್ನಲೆ ಟ್ರಾಫಿಕ್ ಜಾಂ ದಿನನಿತ್ಯ ಸಾಮಾನ್ಯವಾಗಿದೆ. ಮತ್ತು ಸಂಪಿಗೆ ಥಿಯೇಟರ್ ಬಳಿ ಭಾರೀ ವಾಹನಗಳು ತಿರುಗಿ ಹೋಗಲು ವಿಳಂಬ ಆಗುತ್ತಿದೆ. ಕಿರಿದಾದ ರಸ್ತೆಯಲ್ಲಿ ಬಸ್, ಲಾರಿಗಳ ಓಡಾಟದಲ್ಲಿ ವಿಳಂಬ ಇದರಿಂದ ಬೆಳಗ್ಗೆ, ಸಂಜೆ ಹೆಚ್ಚಾಗುವ ಟ್ರಾಫಿಕ್ ಜಾಮ್ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಯಶವಂತಪುರದ ಡಿಸಿಪಿ ಕಚೇರಿಯಿಂದ ಹಿಡಿದು ಸಿ.ವಿ ರಾಮನ್ ರಸ್ತೆಯ ತನಕ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಹಿನ್ನಲೆ ಸಂಪಿಗೆ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ತಡೆ ಹಿಡಿಯಲಾಗಿದೆ.
ಇಂದು ಸಾರ್ವಜನಿಕರ ದೂರಿನ ಹಿನ್ನಲೆ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿದ ಸಚಿವ ಅಶ್ವತ್ಥ ನಾರಾಯಣ. ಕಾಮಗಾರಿ ಹಂತಹಂತವಾಗಿ ವೈಜ್ಞಾನಿಕವಾಗಿ ಬೇಗ ಮುಗಿಸಲು ಸೂಚನೆ ನೀಡಿದ ಸಚಿವರು. ಆದಷ್ಟು ಬೇಗ ವೈಟ್ ಟಾಪಿಂಗ್ ಕಾಮಗಾರಿ ಮುಗಿಸಿ ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
17/09/2022 09:30 pm