ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಕೆಯನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ಕುರಿತಂತೆ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಣಯ ಮಾಡಲಾಗಿದೆ. ಪ್ರಸ್ತುತ ಟಿಡಿಆರ್ ನೀಡದಿರಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಭೂಮಿ ಬಳಕೆಗೆ ಮುಕ್ತ ಅವಕಾಶ ಇರಲಿದೆ. ಸರ್ಕಾರ ಬಳಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ. ಆಗ ಭೂಮಿಗೆ ಬದಲಿ ಏನು ಅನ್ನುವುದು ನಿರ್ಧಾರವಾಗಲಿದೆ. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಆ ಕಾರಣಕ್ಕೆ ತುರ್ತು ಈ ನಿರ್ಧಾರ ತೆಗೆದುಕೊಂಡಿದ್ದೇವೆ.
ಮಾರುಕಟ್ಟೆ ದರವನ್ನ ಸರ್ಕಾರ ನಿಗದಿ ಮಾಡಿದೆ. ಆದ್ರೆ
ಸರ್ಕಾರದ ವ್ಯಾಲ್ಯೂಗಿಂತ 4ರಷ್ಟು ಹೆಚ್ಚಿದ್ದು 3 ಸಾವಿರದ 14ಕೋಟಿ ಕೊಡೋದ್ರಿಂದ ಕರ್ನಾಟಕದ ಅಭಿವೃದ್ಧಿಗೆ ಹೊಡೆತ ಬೀಳಲಿದೆ. ಹೀಗಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಟಿ ಡಿ ಆರ್ ನೀಡಿದ್ರೆ, ಸದರಿ ಟಿಡಿಆರ್ ಹಿಂಪಡೆಯಲು ಸಾಧ್ಯವಿಲ್ಲ ಇದರಿಂದ ರಾಜ್ಯದ ಹಿತಾಸಕ್ತಿ ಮೇಲೆ ಹೊಡೆತ ಬೀಳಲಿದೆ ಹಾಗಾಗಿ TDR ಕೋಡೋದಕ್ಕೆ ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.
PublicNext
24/01/2025 10:00 pm