ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗುತ್ತಿರುವುದರಿಂದ ಇದರ ತಡೆಗೆ ರಾಜ್ಯ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಈ ಕುರಿತಂತೆ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ್, ಅನೇಕರಿಗೆ ಮೈಕ್ರೋ ಫೈನಾನ್ಸ್ ನಿಂದ ಕಿರುಕುಳ ಆಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಜನರಿಗೆ ಶೋಷಣೆ ಆಗದಂತೆ ನಿರ್ಣಯ ಕೈಗೊಳ್ಳಬೇಕಿದೆ.
RBI ಮತ್ತು ಸೆಂಟ್ರಲ್ ಏಜೆನ್ಸಿಗಳು ಇದರ ಬಗ್ಗೆ ನಿರ್ಧಾರ ಮಾಡಬೇಕು.ಸಣ್ಣ ಫೈನಾನ್ಸ್ ಕಂಪನಿಗಳಿಗೆ ನಿಯಮ ತರಲು ಆಗಿಲ್ಲ. ಇದಕ್ಕೆ ಕರ್ನಾಟಕ ಮೈಕ್ರೋ ಫೈನಾನ್ಸ್ ಮನಿ ಲಾಂಡ್ರಿಗ್ ಬಿಲ್ ತರಲು ನಿರ್ಧಾರ ಮಾಡಿದ್ದೇವೆ. ಅಲ್ದೇ ಮೈಕ್ರೋ ಫೈನಾನ್ಸ್ ಹಾವಳಿ ತಡೆಯ ಬಗ್ಗೆ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸಹ ನಡೆಯಲಿದೆ. ಅಲ್ಲಿ ಹೊಸ ಕಾನೂನು ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
PublicNext
24/01/2025 10:53 pm