ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BBMP ಎಲೆಕ್ಷನ್ ಫಿಕ್ಸ್ : ಚುನಾವಣೆಗೆ ಹೈಕೋರ್ಟ್ ಡೆಡ್ಲೈನ್..!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಡಿಸೆಂಬರ್ 31ರ ಒಳಗೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ನ.3ರ ಒಳಗೆ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ನಂತರ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

ಇದಾಗಲೇ ಹೈಕೋರ್ಟ್ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾ ಮಾಡಿತ್ತು. ಇದರ ನಡುವೆಯೇ ಚುನಾವಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಅದರ ನಿರ್ದೇಶನದಂತೆಯೇ ನಡೆದುಕೊಳ್ಳಲಾಗುವುದು ಎಂದು ಸರ್ಕಾರ ಕೂಡ ತಿಳಿಸಿತ್ತು.

ಈ ಅಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಯಾವುದೇ ಕಾರಣಕ್ಕೆ ಚುನಾವಣೆ ವಿಳಂಬ ಮಾಡದಂತೆ ನಿರ್ದೇಶಿಸಿದ್ದಾರೆ.

ಪಾಲಿಕೆಯ 243 ವಾರ್ಡ್ ಗಳಲ್ಲಿ ಒಟ್ಟು 79 ಲಕ್ಷ 19 ಸಾವಿರದ 563 ಮತದಾರರು ಇದ್ದಾರೆ. ಇದರಲ್ಲಿ 41 ಲಕ್ಷ14 ಸಾವಿರ 383 ಪುರುಷರು, 38 ಲಕ್ಷ 03 ಸಾವಿರದ 747 ಮಹಿಳೆಯರು ಹಾಗೂ 1433 ಇತರೆ ಮತದಾರರಿದ್ದಾರೆ.

Edited By : Nirmala Aralikatti
PublicNext

PublicNext

30/09/2022 02:33 pm

Cinque Terre

14.23 K

Cinque Terre

0

ಸಂಬಂಧಿತ ಸುದ್ದಿ