ಬೆಂಗಳೂರು: ರೈನ್ ಬೋ ಡ್ರೈವ್ ಲೇಔಟ್ ನಿವಾಸಿಗಳ ರಾಜಕಾಲುವೆ ಒತ್ತುವರಿ ತೆರವು ವಿಚಾರ ಕೋರ್ಟ್ ಮೆಟ್ಟಿಲಲ್ಲಿದೆ. ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ನ್ಯಾಯ್ಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನೂ ನಿವಾಸಿಗಳು ಇಂದು ವಿಚಾರಣೆಗೆ ಹಾಜರಾಗಿದ್ದರು.
ಸೆ.16 ರಂದು ಕೋರ್ಟ್‌ಗೆ ತಮ್ಮ ದಾಖಲಾತಿಗಳನ್ನು ಸಲ್ಲಿಸಿದ್ದರು. ದಾಖಲೆ ಪರಿಶೀಲಿಸುವಂತೆ ರೈನ್ ಬೋ ಡ್ರೈವ್ ನಿವಾಸಿಗಳು ಮನವಿ ಮಾಡಿದರು. ನಿವಾಸಿಗಳ ಮನವಿಗೆ ಒಪ್ಪಿದ ತಹಶೀಲ್ದಾರ್ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರೈನ್ ಬೋ ಡ್ರೈವ್ ಲೇಔಟ್ 26 ಒತ್ತುವರಿ ಪ್ರಕರಣದ ವಿಚಾರಣೆ ನಡೆಯಿತು.
Kshetra Samachara
20/09/2022 05:40 pm