ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂ.ಗ್ರಾಮಾಂತರ: ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದ ಕಾಂಪೌಂಡ್ ತೆರವು

ಯಲಹಂಕ: ಯಲಹಂಕದಲ್ಲಿಂದು ಬಿಬಿಎಂಪಿಗೆ ಸೇರಿದ ಜೆಸಿಬಿಗಳು ಜೋರಾಗಿ ಘರ್ಜಸಿವೆ. ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸ್ (NCBS) ನ ಹೌಸಿಂಗ್ ಕಾಂಪ್ಲೆಕ್ಸ್ ‌ನವರು ರಾಜಕಾಲುವೆನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದರು.

ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ತಂಡ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಮಾರು 120ಮೀ ಉದ್ದದ ಕಾಂಪೌಂಡ್ ನ ತೆರವುಗೊಳಿಸಿದೆ. ನಾಲ್ಕು ಅಡಿ ಅಗಲ ಮತ್ತು ಎತ್ತರದ ರಾಜಕಾಲುವೆನ ಸ್ಲ್ಯಾಬ್ ಹಾಕಿ ಮುಚ್ಚಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿತ್ತು. ಈ ಕಾಂಪೌಂಡ್ ತೆರವಿನಿಂದ ಅನುಕೂಲ ಆಗಲಿದೆ ಅಂತಾರೆ ಸ್ಥಳೀಯರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Edited By : Nagesh Gaonkar
PublicNext

PublicNext

13/09/2022 08:04 pm

Cinque Terre

37.76 K

Cinque Terre

0