ಪಿಎಸ್ ಐ ಹುದ್ದೆಗೆ ವರ್ಷಗಟ್ಟಲೇ ಕೆಲಸ ಕಾರ್ಯಗಳು ಬಿಟ್ಟು ಕಷ್ಟಪಟ್ಟು ಓದಿದ್ದ ಅಭ್ಯರ್ಥಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಪರೀಕ್ಷೆ ಮುಗಿದು ಒಂದು ವರ್ಷವಾದರೂ ನಮಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಹೀಗಾಗಿ ಇಂದು ಉದ್ಯೋಗವನ್ನು ಬಿಟ್ಟು ನಾವು ಅತಂತ್ರ ಸ್ಥಿತಿಯಲ್ಲಿದ್ದೇವೆ. ಇದು ತುಂಬ ನೋವಿನ ಸಂಗತಿ ಎಂದು ಸಮತಾ ಸೈನಿಕ ದಳದ ಬೆಂಬಲ ಪಡೆದು ಪಿಎಸ್ ಐ ಪಟ್ಟಿಗೆ ಆಯ್ಕೆಯಾದವರು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದೇವೆ. ಆದ್ರೆ ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ನಮಗೆಲ್ಲ ಶಿಕ್ಷೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.ಪಿಎಸ್ ಐ ನೇಮಕ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾದ 400ಕ್ಕೂ ಅಧಿಕ ಅಭ್ಯರ್ಥಿಗಳು ಫ್ರೀಡಂಪಾರ್ಕ್ ನಲ್ಲಿ ಜಮಾಯಿಸಿದ್ದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕ್ತಿದ್ದಾರೆ.
PublicNext
13/09/2022 07:05 pm