ಬೆಂಗಳೂರು: ಗಣೇಶ ಹಬ್ಬ ಬಂದ್ರೆ ಸಾಕು ಯುವಕರು ಹುಮ್ಮಸ್ಸಿನಿಂದ ಮತ್ತು ಶ್ರದ್ಧೆ-ಭಕ್ತಿಯಿಂದ ಗಣೇಶನ ಪೂಜೆ ಮಾಡುತ್ತಾರೆ. ಯಾವುದೇ ರಸ್ತೆ ನೋಡಿದರೂ ಅಲ್ಲಿ ಗಣೇಶ ಇರುತ್ತಾನೆ. ಯಾವುದೇ ಏರಿಯಾ ನೋಡಿದರೂ ಕೂಡ ಗಣೇಶ ಭಕ್ತರಿಗೆ ದರ್ಶನ ನೀಡುತ್ತಾನೆ.
ಮೂರರಿಂದ ಐದು ದಿನ ಶ್ರದ್ಧೆ-ಭಕ್ತಿಯಿಂದ ಯುವಕರು ಪೂಜೆ ಮಾಡಿ ಅದ್ದೂರಿ ಮೆರವಣಿಗೆ ಮಾಡಿ ಗಣಪನ ವಿಸರ್ಜನೆ ಮಾಡುತ್ತಾರೆ. ಆದರೆ ವಿಸರ್ಜನೆಯ ನಂತರ ವಿಘ್ನ ವಿನಾಯಕ ಅನಾಥವಾಗಿ ಕೈ ಕಾಲು ತಲೆ ಮುರಿದುಕೊಂಡು ನೆಲದ ಮೇಲೆ ಬಿದ್ದಿದ್ದಾನೆ. ಹೌದು ಸರ್ಕಾರ ಪಿಓಪಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಡಿ ಎಂದು ಮನವಿ ಮಾಡಿದರೂ ಯಾರು ಕೇರ್ ಮಾಡಲ್ಲ. ಪಿಓಪಿ ಗಣೇಶನ ಪ್ರತಿಷ್ಠಾಪನೆ ಮಾಡಿ ಈಗ ಗಣೇಶ ಅನಾಥವಾಗಿ ನೀರಿನಲ್ಲಿ ಕೊಳೆಯುತ್ತಾ ಬಿದ್ದಿದ್ದಾನೆ.
ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಬನ್ನೇರುಘಟ್ಟ ರಸ್ತೆಯ ಅರಕೆರೆಯ ಬಳಿ ಬಿಬಿಎಂಪಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ನಿರ್ಮಿಸಿದ ಟ್ಯಾಂಕ್‌ನಲ್ಲಿ. ಪಿಓಪಿ ಗಣೇಶ ಕರಗದೆ ನೀರು ಸಂಪೂರ್ಣವಾಗಿ ಹಾಳಾಗಿದ್ದು ಕೆಟ್ಟ ವಾಸನೆ ಬರುತ್ತಿದೆ. ಈ ಟ್ಯಾಂಕ್ ಸರ್ಕಾರಿ ಶಾಲೆ ಕೂಡ ಇದ್ದು ದಿನನಿತ್ಯ ಮಕ್ಕಳು ವಾಸನೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಟ್ಯಾಂಕ್‌ನಲ್ಲಿರುವ ಗಣೇಶನ ಮೂರ್ತಿಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಿ ಮಕ್ಕಳಿಗೆ ವಾಸನೆಯಿಂದ ಮುಕ್ತಿ ನೀಡಬೇಕು.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
13/09/2022 01:49 pm