ಬೆಂಗಳೂರು: ರಾಜ್ಯದಲ್ಲಿ ಶ್ರೀಮಂತರು ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದರೆ ಇತ್ತ ಸುಮಾರು 25 ಲಕ್ಷ ಮಂದಿಗೆ ಉಳಿಯಲು ಮನೆಯೇ ಇಲ್ಲದೇ ಬದುಕು ನಡೆಸುತ್ತಿದ್ದಾರೆ.
ವಸತಿ ಹಾಗೂ ನಿವೇಶನ ರಹಿತರ 2018-19 ಸಮೀಕ್ಷೆಯಲ್ಲಿ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 25,40,206 ಮಂದಿ ವಸತಿ-ನಿವೇಶನ ರಹಿತ ಇರುವುದು ತಿಳಿದುಬಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೈಬಿಟ್ಟು ಹೋದ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆಯಲ್ಲಿ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ 18,78,671 ವಸತಿ ರಹಿತರು ಹಾಗೂ 6,61,535 ನಿವೇಶನ ರಹಿತರು ಸೇರಿದಂತೆ ಒಟ್ಟು 25,40,206 ಮಂದಿಯನ್ನು ಗುರುತಿಸಲಾಗಿದೆ.
2018-19 ರ ಪಟ್ಟಿಗೆ ಕೇಂದ್ರ ಸರ್ಕಾರವು 2022 ಜನವರಿಯಲ್ಲಿ ಅನುಮೋದನೆ ನೀಡಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ 1.41.391 ಮನೆಗಳ ನಿರ್ಮಾಣದ ಗುರಿ ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಸತಿ -ನಿವೇಶನ ರಹಿತರಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಬೆಳಗಾವಿಯಲ್ಲಿ 1,87,956 ಮಂದಿ ವಸತಿ ರಹಿತರು, 19192 ನಿವೇಶನ ರಹಿತರಿದ್ದಾರೆ.
ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯಿದ್ದು,1,50,979 ಮಂದಿ ವಸತಿ ರಹಿತರಿದ್ದರೆ, 4925 ನಿವೇಶನ ರಹಿತರಿದ್ದಾರೆ. ಮೂರನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆಯಿದ್ದು,1,11,207 ಮಂದಿ ವಸತಿ ರಹಿತರಿದ್ದರೆ, 14811 ನಿವೇಶನ ರಹಿತರಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
PublicNext
26/09/2022 10:30 am