ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳಿಂದ ಸಿಬ್ಬಂದಿ ಮೇಲೆ ಕಿರುಕುಳ ಮೀತಿ ಮೀರುತ್ತಿರುವ ಆಪಾದನೆ ಕೇಳಿ ಬರ್ತಾಯಿದೆ.
ಇದಕ್ಕೆ ಪುಷ್ಟಿ ನೀಡುವಂತೆ ವೇತನ ತಡೆ ಹಿಡಿದು ಮಾನಸಿಕ ಕಿರುಕುಳ ನೀಡುತ್ತಿರುವ ಅಪಾದನೆಯನ್ನೆ ಬಿಬಿಎಂಪಿ ಸಿಬ್ಬಂದಿ ವಜೀರ್ ಅಹಮದ್ ಮಾಡಿದ್ದಾರೆ.
ಇವರು ಚಾಮರಾಜ ಪೇಟೆಯ ರೆವೆನ್ಯೂ ಇನ್ಸ್ ಪೆಕ್ಟರ್. ಅನಾರೋಗ್ಯದ ನಿಮಿತ್ತ ರಜೆಯನ್ನು ಹಾಕಿದ್ದರಂತೆ. ಇದೀಗ ಅವರ ವೇತನವನ್ನು ತಡೆ ಹಿಡಿಯಲಾಗಿದೆ.
ಚಾಮರಾಜ ಪೇಟೆ ಆರ್.ಓ. ನನ್ನ ಸಂಬಳ ತಡೆ ಹಿಡಿದಿದ್ದು,ನಾಳೆ ಬೆಳಗ್ಗೆ ಒಳಗೆ ವೇತನ ನೀಡಬೇಕು.ಇಲ್ಲವಾದಲ್ಲಿ ವಿಷ ತಗೊಂಡು ಪ್ರಾಣ ಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
PublicNext
05/02/2022 06:15 pm