ಯಲಹಂಕ ತಾಲೂಕಿನ ಹೆಸರಘಟ್ಟ, ಚೊಕ್ಕನಹಳ್ಳಿ, ಚಲ್ಲಹಳ್ಳಿ, ಹನಿಯೂರು, ಕೊಡಿಗೆತಿರುಮಳಾಪುರ ಸರ್ಕಾರಿ ಶಾಲೆಗಳನ್ನು WME ಸಾಫ್ಟ್‌ವೇರ್ ಕಂಪನಿ ಐದು ವರ್ಷ ದತ್ತು ಪಡೆದುಕೊಂಡಿದೆ. ಇದೀಗ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ 1000 ಮಕ್ಕಳಿಗೆ 6 ಲಕ್ಷ ಬೆಲೆಯ ನೋಟ್ ಬುಕ್‌ಗಳನ್ನ ವಿತರಿಸಲಾಯಿತು. ಈ ಮೊದಲು ಒಂದು ಶಾಲೆನ ದತ್ತು ಪಡೆದು ಅಭಿವೃದ್ಧಿ ಪಡಿಸಿಲಾಯ್ತು. ಪರಿಣಾಮ ಶಾಲೆಯಲ್ಲಿ 58 ಜನ ವಿದ್ಯಾರ್ಥಿಗಳು ಹೊಸದಾಗಿ ಅಡ್ಮಿಷನ್ ಆಗಿ ಓದುತ್ತಿದ್ದಾರೆ. ಮುಚ್ಚಲ್ಪಡುತ್ತಿದ್ದ ಶಾಲೆ ಇದೀಗ ಮಾದರಿ ಶಾಲೆಯಾಗುವತ್ತ ಹೆಜ್ಜೆಹಾಕಿದೆ.
ಬೆಂಗಳೂರಿನ WME ಕನ್ಸಲ್ಟನ್ಸಿ ಸಾಫ್ಟ್‌ವೇರ್ ಕಂಪನಿ ಗ್ರಾಮೀಣ ಪ್ರದೇಶದಲ್ಲಿ ಅತಿ ಹಿಂದುಳಿದ ಸರ್ಕಾರಿ ಶಾಲೆಗಳನ್ನು ಗುರುತಿಸುತ್ತಿದೆ. ಮೂಲಭೂತ ಸೌಲಭ್ಯ ಕಲ್ಪಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶೈಕ್ಷಣಿಕ ಸೇವೆ ಒದಗಿಸುತ್ತಿದೆ. ಸರ್ಕಾರಿ ಶಾಲಾ ಮಕ್ಕಳು ಸಹ ಖಾಸಗಿ ಶಾಲೆ ಮಕ್ಕಳಂತೆ ಎಲ್ಲಾ ಸೌಲಭ್ಯ ಸಿಗಬೇಕು. ಈ ಉದ್ದೇಶದಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಲು ಸಂಸ್ಥೆ ನೆರವು ನೀಡ್ತಿದೆ. ಇಂಗ್ಲೀಷ್ ಭಾಷಾ ಕಲಿಕೆ, ಶಾಲಾ ಪೀಠೋಪಕರಣ, ಸಮವಸ್ತ್ರ, ಕೊಠಡಿಗಳ ಅಭಿವೃದ್ಧಿ ಜೊತೆಗೆ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸುತ್ತಿದೆ. ಸರ್ಕಾರಿ ಶಾಲಾಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿರುವ ಸಾಫ್ಟ್‌ವೇರ್ ಕಂಪನಿ ಸೇವಾಕಾರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಈ ರೀತಿಯ ಶೈಕ್ಷಣಿಕ ಸೇವೆ ಎಲ್ಲರಿಗೂ ಸಿಗುವಂತಾಗಲಿ.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
04/10/2022 02:06 pm