ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದಂತೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ವಾರ್ಡ್ ವಿಂಗಡಣೆ ಬಗ್ಗೆ ತಕರಾರು ಎತ್ತಿ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಕೋರ್ಟ್ ಆ ಅರ್ಜಿಯನ್ನ ವಜಾ ಮಾಡಿದೆ.ಈಗ ಇರುವುದು ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರ.
ಮೀಸಲಾತಿ ಪಟ್ಟಿಗೂ ನಮಗೂ ಸಂಬಂಧ ಇಲ್ಲ, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರೋದು ಹೀಗಾಗಿ ಎಲೆಕ್ಷನ್ ನಡೆಸೋದಕ್ಕೆ ನಾವು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೆವೆ .ಚುನಾವಣಾ ಆಯೋಗ ಯಾವಾಗ ರೆಡಿ ಅಂದರೆ ನಾವು ಸಿದ್ದ.ಮತದಾರರ ಪಟ್ಟಿಯನ್ನು ಕೂಡ ಅಂತಿಮಗೊಳಿಸಿ ಪ್ರಕಟಿಸಿದ್ದೆವೆ.ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯಾದಂತಹ ಗೊಂದಲ ಇಲ್ಲ .2011ರ ಜನಗಣತಿ ಪ್ರಕಾರನೇ ಮತದಾರ ಪಟ್ಟಿಯನ್ನ ಅಂತಿಮಗೊಳಿಸಲಾಗಿದೆ.ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೆವೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
PublicNext
30/09/2022 04:18 pm