ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಮೆಗತಿಯಲ್ಲಿ ಸಾಗುತ್ತಿರುವ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಪ್ರಾರಂಭಿಸಿ ಇಂದಿಗೆ ಹದಿನೈದು ದಿನಗಳು ಕಳೆದಿದ್ದರೂ ಬರಿ 5,000 ಮೀಟರ್ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದಾರೆ.

ಪಾಲಿಕೆ ಮುಖ್ಯ ಎಂಜಿನಿಯರ್ ಲೋಕೇಶ್ ಮಾತನಾಡಿ, ಪಾಲಿಕೆಯು ಕಂದಾಯ ದಾಖಲೆ ಬಳಸಿ ಮಹದೇವಪುರ ವಲಯದ ಅತಿಕ್ರಮಣಗಳ ಪಟ್ಟಿ ಮಾಡಿ ನೆಲಸಮಗೊಳಿಸಿದೆ.

ಮಹದೇವಪುರ ವಲಯದ ಪಾಣತ್ತೂರು, ಹೂಡಿ, ದೊಡ್ಡನೆಕುಂದಿ, ವರ್ತೂರು, ಕುಂದಲಹಳ್ಳಿ, ಮುನ್ನೇಕೊಳಲ, ಕಸವನಹಳ್ಳಿಯಲ್ಲಿ ಅತಿಕ್ರಮಣ ಕಂಡುಬಂದಿದೆ. ಭೂಮಾಪಕರು ಮಾಡಿದ ಗುರುತುಗಳ ಪ್ರಕಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.

ಮಹದೇವಪುರ ವಲಯದ ಬಿಬಿಎಂಪಿ ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಮಳೆನೀರು ಚರಂಡಿ ವಿಭಾಗದ ಅಧಿಕಾರಿಗಳಿಗೆ ತ್ವರಿತವಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

29/09/2022 01:03 pm

Cinque Terre

29.88 K

Cinque Terre

0

ಸಂಬಂಧಿತ ಸುದ್ದಿ