ನಮ್ಮ ರಾಜ್ಯದ ಪೊಲೀಸರು ಈ ಮಟ್ಟಕ್ಕೆ ಇಳಿಯಬಾರದಿತ್ತು. ಕೊಲೆ, ಸುಲಿಗೆ ದರೋಡೆಯಂಥಹ ಪ್ರಕರಣಗಳನ್ನು ಭೇದಿಸುವ ಟಾರ್ಗೆಟ್ ಕೊಡಬೇಕಾದ ಅಧಿಕಾರಿಗಳು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ಹಾಕಿ ಅಂತ ಟ್ರಾಫಿಕ್ ಪೊಲೀಸರಿಗೆ ಟಾರ್ಗೆಟ್ ನೀಡಿದ್ದಾರೆ.
ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಇಲಾಖೆಯೆ ಭಕ್ಷಣೆಗೆ ಆದೇಶ ನೀಡುವುದು ಎಷ್ಟು ಸರಿ? ಇದು ಸಂಚಾರ ನಿಯಮ ಪಾಲನೆಗೆ ಕೈಗೊಂಡ ಕ್ರಮವೋ ಅಥವಾ ಖಾಲಿಯಾದ ಸರಕಾರ ಖಜಾನೆ ತುಂಬುವು ಸಂಚೋ ಎಂದು ಸಾರ್ವಜನಿಕರು ಕೇಳುವಂತಾಗಿದೆ.
ಅಂದ್ರೆ ಇವರ ಟಾರ್ಗೆಟ್ ರೀಚ್ ಆಗಲು ಅಮಾಯಕರು ಬಲಿಯಾಗಬೇಕೆ? ಸಣ್ಣ ಪುಟ್ಟ ಕಾರಣಗಳಿಗೆ ವಾಹನ ಸವಾರರ ಜೀವ ಹಿಂಡುವ ಪೊಲೀಸರಿಗೆ ಈಗ ಅಧಿಕಾರಿಗಳ ಈ ಟಾರ್ಗೆಟ್ ರೀಚ್ ಆದೇಶ ಬಂಪರ್ ಲಾಟರಿ ಅನ್ನಬಹುದು.
ನಗರದಲ್ಲಿ ಟೋಯಿಂಗ್ ಸ್ತಬ್ದವಾಗಿದೆ ತಿಂಗಳುಗಳೆ ಕಳೆದುಹೋಗಿದೆ. ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಬಿಟ್ಟು ಬೇರೆ ಯಾವೂದೇ ವಾಹನವನ್ನು ತಡೆಯದಂತೆ ಡಿಜಿ ಕೂಡ ಆದೇಶ ಮಾಡಿದ್ದಾರೆ. ಹೀಗಿದ್ದರೂ ಸಂಚಾರ ಪೊಲೀಸರಿಗೆ ಇಂತಿಷ್ಟೇ ಕೇಸ್ ಹಾಕಬೇಕು ಅಂತ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಟಾರ್ಚರ್ ನೀಡ್ತಿದ್ದಾರೆ.
ಈ ಹಿಂದೆ ಕೂಡ ಪಬ್ಲಿಕ್ ನೆಕ್ಸ್ಟ್,ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಪ್ರೊಡಕ್ಶನ್ ಟಾರ್ಗೆಟ್ ನೀಡುವಂತೆ ಸಂಚಾರ ಪೊಲೀಸರಿಗೆ ಟಾರ್ಗೆಟ್ ನೀಡ್ತಿದ್ದಾರೆ ಅಂತ ಸುದ್ದಿ ಬಿತ್ತರಿಸಿತ್ತು. ಆದರೆ ಈ ವಿಚಾರಕ್ಕೆ ಸಂಚಾರಿ ಜಂಟಿ ಆಯುಕ್ತರು ಆ ರೀತಿ ಯಾವ ಟಾರ್ಗೆಟ್ ನೀಡ್ತಿಲ್ಲ ಅಂತ ಮಾಹಿತಿ ನೀಡಿದ್ರು.
ಸದ್ಯ ಪಬ್ಲಿಕ್ ನೆಕ್ಸ್ಟ್ ದಾಖಲೆ ಸಮೇತ ಟಾರ್ಗೆಟ್ ಭೂತದ ವರದಿ ಪ್ರಸಾರ ಮಾಡ್ತಿದೆ. ರಸ್ತೆಯಲ್ಲಿ ದಂಡ ವಿಧಿಸಿವ ಸಬ್ ಇನ್ಸ್‌ಪೆಕ್ಟರ್, ಎಸ್‌ಐಐ ಇಂತಿಷ್ಟೇ ಕೇಸ್ ಹಾಕಬೇಕು ಅಂತ ಟಾರ್ಗೆಟ್ ನೀಡ್ತಿದ್ದಾರೆ. ಟಾರ್ಗೆಟ್ ಫುಲ್ ಫಿಲ್ ಮಾಡದಿದ್ರೆ ನೋಟೀಸ್ ಕೂಡ ಜಾರಿಯಾಗುತ್ತದೆ. ಪದೇ ಪದೇ ನೋಟೀಸ್ ಮೂಲಕ ಅಧಿಕಾರಿಗಳಿಗೆ ಟಾರ್ಗೆಟ್ ಎಚ್ಚರಿಕೆ ನೀಡಲಾಗುತ್ತಿದೆ. ಜೊತೆಗೆ ವೈರ್‌ಲೆಸ್‌ನಲ್ಲಿ ಇಂಥಹ ಕೇಸ್‌ಗಳನ್ನೇ ಈ ದಿನ ಹಾಕಬೇಕು ಎನ್ನುವ ನಿರ್ದೇಶನ ಕೂಡ ನೀಡಲಾಗ್ತಿದೆ.
ಒಂದು ಟೋಯಿಂಗ್ ಇಲ್ಲ, ಸುಖಸುಮ್ಮನ ವೆಹಿಕಲ್ ಚೆಕ್ ಮಾಡಂಗಿಲ್ಲ. ಆದ್ರೂ ಟಾರ್ಗೆಟ್ ರೀಚ್ ಮಾಡ್ಬೇಕು. ಇನ್ನೂ ಜನ ಕೂಡ ರೂಲ್ಸ್ ತಕ್ಕಮಟ್ಟಿಗೆ ಫಾಲೋ ಮಾಡ್ತಿದ್ದು ಕೇಸ್‌ಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗಿದೆ. ಇಷ್ಟಾದ್ರೂ ಕಳೆದ ವರ್ಷದ ಟಾರ್ಗೆಟ್‌ಗಿಂತ ಹೆಚ್ಚು ಕೇಸ್ ಆಗಬೇಕು ಎನ್ನುವುದು ಅಧಿಕಾರಿಗಳ ಅಪೇಕ್ಷೆ.
ಅಧಿಕಾರಿಗಳು ಈ ಟಾರ್ಗೆಟ್ ಮನಸ್ಥಿತಿಯಿಂದ ಹೊರ ಬಂದು ಕೆಲಸ ಮಾಡುವ ಅನಿವಾರ್ಯತೆ ಇದೆ. ಅಧಿಕಾರಿಗಳು ಈ ಗಮನ ಹರಿಸಬೇಕು ಎಂದು ಟ್ರಾಫಿಕ್ ಪೊಲೀಸರು ಮತ್ತು ಸಾರ್ವಜನಿಕರ ಪರವಾಗಿ ಪಬ್ಲಿಕ್ ನೆಕ್ಸ್ಟ್ ಗೃಹ ಸಚಿವ ಆಗರ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದೆ.
ವರದಿ: ಶ್ರೀನಿವಾಸ್ ಚಂದ್ರ ಕ್ರೈಂ ಬ್ಯುರೋ, ಬೆಂಗಳೂರು
PublicNext
26/09/2022 01:49 pm