ಬೆಂಗಳೂರು: ಖಾಸಗಿ ವ್ಯಕ್ತಿಗೆ ಜಾಗ ಮಾಡಿಕೊಡಲು ವಿದ್ಯುತ್ ಕಂಬವನ್ನು ಶಿಫ್ಟ್ ಮಾಡಿರುವ ಆರೋಪ ಬೆಸ್ಕಾಂ ಮೇಲೆ ಸುಂಕದಕಟ್ಟೆಯ ನಿವಾಸಿಗಳು ಮಾಡುತ್ತಿದ್ದಾರೆ. ರಸ್ತೆಯಲ್ಲಿದ್ದ ವಿದ್ಯುತ್ ಕಂಬವನ್ನು ತೆಗೆದು ಬೇರೆ ರಸ್ತೆಗೆ ಶಿಫ್ಟ್ ಮಾಡಿದ್ದು, 30 ಮನೆಗಳಿಗೆ ವಿದ್ಯುತ್ ಸಂಪರ್ಕ ಕಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆ ವ್ಯಾಪ್ತಿಯ ಪಿಲ್ಲಪ್ಪನಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಬೆಸ್ಕಾಂ ಅಧಿಕಾರಿಗಳ ನಡೆಗೆ ಕರೆಂಟ್ ಇಲ್ಲದೇ ಜನ ಪರದಾಡುತ್ತಿದ್ದಾರೆ. ವಾರದಿಂದ ಕರೆಂಟ್ ಇಲ್ಲದೆ ನಿವಾಸಿಗಳು ಕಂಗಾಲಾಗಿದ್ದಾರೆ. ರಾತ್ರಿ ಹೊತ್ತು ಹಾವುಗಳಿವೆ, ಓಡಾಡೋಕೆ ಭಯ ಆಗುತ್ತೆ . ಬೆಸ್ಕಾಂ ಅಧಿಕಾರಿಗಳು ದಬ್ಬಾಳಿಕೆಯಿಂದ ಈ ರೀತಿ ಮಾಡಿದ್ದಾರೆ ಅಂತ ನಿವಾಸಿಗಳು ಕಿಡಿ ಕಾರಿದ್ದಾರೆ.
PublicNext
20/11/2024 04:45 pm