", "articleSection": "Politics,Infrastructure,WaterPower,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738073452-A6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಕಾವೇರಿ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾ...Read more" } ", "keywords": "DK Shivakumar, DK Shivakumar news, Karnataka Congress, DK Shivakumar politician, Kanakapura MLA, Karnataka politics, Congress leader DK Shivakumar, DK Shivakumar latest updates.,Bangalore,Bangalore-Rural,Politics,Infrastructure,WaterPower,Government,News,Public-News", "url": "https://publicnext.com/node" } ಬೆಂಗಳೂರು : 'ಕಾವೇರಿ ನೀರಿನ ಬೆಲೆ ಏರಿಕೆ ಅನಿವಾರ್ಯ' - ಡಿಸಿಎಂ ಡಿ.ಕೆ ಶಿವಕುಮಾರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 'ಕಾವೇರಿ ನೀರಿನ ಬೆಲೆ ಏರಿಕೆ ಅನಿವಾರ್ಯ' - ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : 'ಕಾವೇರಿ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

'2014 ರಿಂದ ಇಲ್ಲಿಯ ತನಕ, ಅಂದರೆ 11 ವರ್ಷಗಳಿಂದ ನಗರದಲ್ಲಿ ಕಾವೇರಿ ನೀರಿನ ದರ ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬೆಂಗಳೂರು ಜಲಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ರೂ. ನಷ್ಟ ಆಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿ ರೂ. ಆಗುತ್ತಿತ್ತು. ಈ ಬಾರಿ 75 ಕೋಟಿ ರೂ. ಆಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ' ಎಂದು ತಿಳಿಸಿದರು.

ಎಲ್ಲವನ್ನೂ ಉಚಿತವಾಗಿ ಕೊಟ್ರೆ ಸರ್ಕಾರ ಹೇಗೆ ನಡೆಯಬೇಕು, ಜಲಮಂಡಳಿ ಈಗಾಗಲೇ ನಷ್ಟದಲ್ಲಿದೆ. ಹಾಗಾಗಿ ನೀರಿನ ಬೆಲೆ ಏರಿಕೆ ಅನಿವಾರ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಬೆಂಗಳೂರು ಸ್ಥಳೀಯ ಇಲಾಖೆಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೀಘ್ರವೇ ಕಾವೇರಿ ನೀರಿನ ದರ ಏರಿಕೆ ಬಗ್ಗೆ ಸೂಚಿಸಲಾಗಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ನೀರು ಉಚಿತವಾಗಿ ಕೊಡ್ತಿದ್ದೇವೆ, ಆದ್ರೆ ಇನ್ಮೇಲೆ ಆಗಲ್ಲ, ಒಂದು ಲೀಟರ್‌ಗೆ ಒಂದು ಪೈಸೆ ಆದರೂ ಬಿಲ್ ಕಟ್ಟಲೇಬೇಕು. ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು? ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಎಲ್ಲ ಸರಿ ತೂಗಿಸಿಕೊಂಡು ಹೋಗಬೇಕಲ್ವಾ..? ಎಂದು ಹೇಳಿದ್ದಾರೆ.

Edited By : Suman K
PublicNext

PublicNext

28/01/2025 07:40 pm

Cinque Terre

33.83 K

Cinque Terre

1