ಬೆಂಗಳೂರು: ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳಲ್ಲಿ (ನಾನ್ ಆರ್ಎಪಿಡಿಆರ್ ಪಿ) ಸಮಗ್ರ ಕಂದಾಯ ನಿರ್ವಹಣಾ ಹೊಸ ತಂತ್ರಾಂಶ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಜನವರಿ 30 ರಿಂದ ಫೆಬ್ರವರಿ 1 (3 ದಿನ)ಗಳವರೆಗೆ ಬಿಲ್ಲಿಂಗ್, ಹೊಸ ಸಂಪರ್ಕ ಹಾಗೂ ತಂತ್ರಾಂಶ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದ್ದು, ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ, ಬೆಸ್ಕಾಂ ವ್ಯಾಪ್ತಿಯ ಉಳಿದ 7 ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಸಂಗ್ರಹ ಹೊರತು ಪಡಿಸಿ ತಂತ್ರಾಂಶ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
30/01/2025 11:57 am