", "articleSection": "Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738067399-A4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮೈಕ್ರೋ ಫೈನಾನ್ಸರ್ಸ್ ಗಳ ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈ‌ನಾನ್ಸರ್ಸ್ ಹಾವಳಿಗೆ ಮೂಗುದಾರ ಹಾಕಲು ಪೊಲೀ...Read more" } ", "keywords": ",Bangalore,Bangalore-Rural,Crime,Law-and-Order,Government,News,Public-News", "url": "https://publicnext.com/node" } ಮೈಕ್ರೋ ಫೈನಾನ್ಸ್ ಜೊತೆಗೆ ಮೀಟರ್ ಬಡ್ಡಿ ಹೆಸ್ರಲ್ಲಿ ಕಿರುಕುಳ ನೀಡಿದ್ರು ಕಾನೂನು ಕ್ರಮ- ಕಮಿಷನರ್ ದಯಾನಂದ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಕ್ರೋ ಫೈನಾನ್ಸ್ ಜೊತೆಗೆ ಮೀಟರ್ ಬಡ್ಡಿ ಹೆಸ್ರಲ್ಲಿ ಕಿರುಕುಳ ನೀಡಿದ್ರು ಕಾನೂನು ಕ್ರಮ- ಕಮಿಷನರ್ ದಯಾನಂದ್

ಬೆಂಗಳೂರು: ಮೈಕ್ರೋ ಫೈನಾನ್ಸರ್ಸ್ ಗಳ ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈ‌ನಾನ್ಸರ್ಸ್ ಹಾವಳಿಗೆ ಮೂಗುದಾರ ಹಾಕಲು ಪೊಲೀಸರಿಂದ ಹೊಸ ಗೈಡ್ ಲೈನ್ ಹೊರಡಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಕಮಿಷನರ್ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಕಠಿಣ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸರ್ಸ್ ಗಳು ಬಡವರ ರಕ್ತ ಹಿರುತ್ತಿದ್ದು. ಮರ್ಯಾದೆಗೆ ಅಂಜಿ ಹಲವರು ಊರು ಬಿಟ್ಟು ಹೋಗ್ತಾ ಇದ್ದರೆ ಇನ್ನು ಕೆಲವರು ಪ್ರಾಣ ಕಳೆದುಕೊಳ್ತಾ ಇದ್ದಾರೆ. ಹಾಗಾಗಿ ಮೈಕ್ರೋ ಫೈನಾನ್ಸರ್ಸ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಅಂಶಗಳನ್ನ‌ ಒಳಗೊಂಡ ಹೊಸ ಗೈಡ್ ಲೈನ್ ಬಿಡುಗಡೆ ಮಾಡಿದ್ದಾರೆ.

* ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ಬರೆಯವುದನ್ನ ತಡೆಗಟ್ಟ ಬೇಕು

* ಬೀಗ ಹಾಕಿರೋ ಮನೆಗಳನ್ನ ಗುರುತಿಸಿ ಸಾಲ ಪಡೆದಿರೋ ಬಗ್ಗೆ ಗೋಡೆ ಬರಹ ಬರೆಯುವವರ ವಿರುದ್ಧ ಕ್ರಮ ವಹಿಸಬೇಕು

* ಅಕ್ರಮವಾಗಿ ಮೈಕ್ರೋ ಫೈನಾನ್ಸ್ ವ್ಯವಹಾರ ಮಾಡುತ್ತಿರುವ ಫೈನಾನ್ಸರ್ಸ್ ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು

* ಫೈನಾನ್ಸರ್ಸ್ ಗಳ ಕಿರುಕುಳದಿಂದ ನೊಂದ ಜನರು ಪೊಲೀಸ್ ಠಾಣೆಗೆ ಬಂದರೆ ಪೊಲೀಸರು ಸ್ಪಂದಿಸಬೇಕು

* ಆರ್ ಬಿಐ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಾಲ ನೀಡಿರುವಂತ ಕಂಪನಿಗಳ ಪಟ್ಟಿ ಮಾಡಿ ಅಗತ್ಯ ಕ್ರಮ‌ಕೈಗೊಳ್ಳಬೇಕು

* ಮೈಕ್ರೊ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಮಾತನಾಡಲು ಸಂಬಂಧಪಟ್ಟ ಎಸ್ಪಿ ಗಳಿಗೆ ಸೂಚನೆ

ಹೀಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಸೂಚನೆ ಕೊಡಲಾಗಿದೆ. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ದಂಧೆ ಮಾಡೋರಿಗೆ ಕಾನೂನು ಎಚ್ಚರಿಕೆ ನೀಡಲಾಗಿದೆ. ಯಾರಾದರೂ ಕಿರುಕುಳ ನೀಡಿದ್ರೆ ಪೊಲೀಸ್ರಿಗೆ ಅಥವಾ 112ಗೆ ಕರೆ ಮಾಡುವಂತೆ ಕಮಿಷನರ್ ತಿಳಿಸಿದ್ದಾರೆ.

Edited By : Suman K
PublicNext

PublicNext

28/01/2025 06:00 pm

Cinque Terre

40.69 K

Cinque Terre

0