ಬೆಂಗಳೂರು: ದಿವಂಗತ ಅನಂತಕುಮಾರ್ ಅವರದ್ದು ಚುಂಬಕ ವ್ಯಕ್ತಿತ್ವ. ಅವರು ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದಂತಹ ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸುತ್ತ ಕಂಕಣಬದ್ದರಾಗಿರಬೇಕು ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಇಂದು ದಿವಂಗತ ಅನಂತಕುಮಾರ್ ಅವರ 63 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, 1963 ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪಿಯುಸಿ ಫಸ್ಟ್ ಇಯರ್‌ನಲ್ಲಿ ಇರುವಾಗ ನನ್ನ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್ ಜೊತೆ ಆಗಿದೆ. ಅನಂತಕುಮಾರ್ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ಒಡನಾಟ ನೆನೆಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದರು. ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ ಇದೆ.
ನಮ್ಮೆಲ್ಲರ ಭಾವನೆಗಳ ಜೊಡಣೆ ಪುಸ್ತಕದಲ್ಲಿ ಆಗಿದೆ. ಅನಂತಕುಮಾರ್ ನೆನಪು ಸದಾ ಹಸಿರಾಗಿರಬೇಕು, ಅದಕ್ಕೆ ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳ ಹೆಚ್ಚಾಗಬೇಕು. ಅವರ ನೆನೆಪು ಎಂದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೇರಣೆ ಪಡೆದು ಮುಂದಕ್ಕೆ ಹೋಗುವಂತಹದ್ದು. ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸಲು ಕಂಕಣಬದ್ದರಾಗಿಬೇಕು. ಅವರು ನಮ್ಮೊಂದಿಗೆ ಇಂದು ಇಲ್ಲ, ಅವರು ಮಾಡಿರುವ ಕೆಲಸದ ಮೂಲಕ ಅವರು ಇನ್ನು ನಮ್ಮ ಮಧ್ಯೆ ಇದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರ ಕ್ರೀಯಾಶೀಲ ಕಾರ್ಯಗಳ ಮೂಲಕ ಇನ್ನು ಜೀವಂತವಾಗಿದ್ದಾರೆ ಎಂದರು.
Kshetra Samachara
21/09/2022 08:28 pm