ಬೆಂಗಳೂರು: ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿ ಗಂಧದ ಮರ ಕದಿಯುತ್ತಿದ್ದ ಮೂವರು ಕಳ್ಳರನ್ನ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 150 ಕೆಜಿ ಶ್ರೀಗಂಧದ ತುಂಡುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೀಣ್ಯ ಟೋಲ್ ಮೂಲಕ ಹಾದು ಹೋಗ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಂದಿನಿ ಲೇಔಟ್, ಆರ್‌ಎಂಸಿ ಯಾರ್ಡ್‌ನಲ್ಲಿ ಶ್ರೀಗಂಧದ ಮರ ಕಡಿದು ಕದ್ದೊಯ್ದಿದ್ದರು. ಮಾರುತಿ 800 ಕಾರಿನಲ್ಲಿ ಮರದ ದಿಮ್ಮಿ ಸಾಗಿಸ್ತಿದ್ದ ಕಳ್ಳರನ್ನ ಅರೆಸ್ಟ್‌ಮಾಡಿದ್ದಾರೆ.
ಟೋಲ್‌ನಲ್ಲಿ ಸಿಕ್ಕ ಕಾರಿನ ನಂಬರ್‌ನಿಂದ ಕಳ್ಳರನ್ನ ಪತ್ತೆ ಹಚ್ಚಿ ಬಾಗಲಗುಂಟೆ ಪೊಲೀಸರು ಕೊನೆಗೂ ಶ್ರೀಗಂಧ ಚೋರರನ್ನ ಬಂಧಿಸಿದ್ದಾರೆ.
PublicNext
06/10/2022 06:45 pm