ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಡ್ವಾನ್ಸ್ ಹಣ ವಾಪಸ್ ಕೊಟ್ಟಿಲ್ಲ ಅಂತ ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ಅಡ್ವಾನ್ಸ್ ಹಣ ವಾಪಸ್ ಕೊಟ್ಟಿಲ್ಲ ಅಂತಾ ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಬಾವನಗುಡಿಯಲ್ಲಿ ನಡೆದಿದೆ‌.

ಕುಮಾರ್ ಎಂಬ ಕೆಲಸಗಾರನಿಗೆ ಮೈ ತುಂಬಾ ಬಾಸುಂಡೆ ಬರುವಂತೆ ಹಲ್ಲೆ ಮಾಡಲಾಗಿದೆ. ಎನ್.ಆರ್ ಕಾಲೋನಿಯ ಸೌತ್ ಕಿಚನ್ ಹೊಟೇಲ್ನಲ್ಲಿ ಕೂಡಿ ಹಾಕಿ ಸೌತ್ ಕಿಚನ್ ಮಾಲೀಕ ಸಂಜಯ್ ಹಾಗೂ ಸಂತೋಷ್ ಪ್ರಭಾಕರ್‌ರಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ 6 ವರ್ಷಗಳಿಂದ ಸೌತ್ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಮನೆಯಲ್ಲಿ ಸಮಸ್ಯೆ ಅನಾರೋಗ್ಯ ಹಿನ್ನೆಲೆ 3 ಲಕ್ಷ ಹಣವನ್ನ ಅಡ್ವಾನ್ಸ್ ರೀತಿ ಪಡೆದಿದ್ದ. ಮಾಲೀಕರಿಂದ ಹಂತ ಹಂತವಾಗಿ ಪ್ರತಿ ತಿಂಗಳ 5 ,10ಸಾವಿರ ಹಣ ಸಾಲವಾಗಿ ಪಡೆದಿದ್ದ. ಕುಮಾರ್‌ಗೆ ಸಾಲ‌ ತೀರಿಸಲು ಸಾಧ್ಯವಾಗಿರಲಿಲ್ಲ.

ಮೂರು ತಿಂಗಳ ಹಿಂದೆ ಕುಮಾರ್ ಕೆಲಸ ಬಿಟ್ಟಿದ್ದ.

ಕಳೆದ ತಿಂಗಳ 30 ರಂದು ಕುಮಾರ್‌ಗೆ ಕರೆ ಮಾಡಿದ್ದ ಮಾಲೀಕರು ಹೊಟೇಲ್ ಬಳಿ ಕರೆಸಿಕೊಂಡು ರೂಮ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರಂತೆ‌. ಸದ್ಯ ಬಸವನಗುಡಿ ಠಾಣೆಗೆ ಕುಮಾರ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ‌‌.

Edited By : Nagesh Gaonkar
PublicNext

PublicNext

04/10/2022 10:40 pm

Cinque Terre

41.13 K

Cinque Terre

0