ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿಯ ಆವತಿ ಗ್ರಾಮ ಪಂಚಾಯ್ತಿಗೆ ಚಪ್ಪಲಿ ಹಾರದ ಪೂಜೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯ್ತಿಗೆ ಗಾಂಧಿ ಜಯಂತಿಯಂದೇ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ.

ನಿನ್ನೆ ಗ್ರಾಮಪಂಚಾಯ್ತಿ ಕಾರ್ಯಾಲಯದಲ್ಲಿ ಸಿಬ್ಬಂದಿ ಗಾಂಧಿ ಜಯಂತಿ ಆಚರಣೆ ನಡೆಸಿದ್ದರು. ನಂತರ ಕಛೇರಿ ಬಾಗಿಲು ಮುಚ್ಚಲಾಗಿತ್ತು. ಕಛೇರಿ ಬಾಗಿಲು ಮುಚ್ಚಿದ ನಂತರ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಈ ಬಗ್ಗೆ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಇ.ಓ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿ.ಡಿ.ಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನೂ ಪ್ರತಿವರ್ಷ ದಸರಾ ಹಬ್ಬಕ್ಕೆ ಗ್ರಾಮ ಪಂಚಾಯ್ತಿಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಬೋನಸ್ ನೀಡಲಾಗ್ತಿತ್ತು. ಆದ್ರೆ ಈ ಬಾರಿ ಬೋನಸ್ ನೀಡಲು ಪಿ.ಡಿ.ಓ ನಿರಾಕರಿಸಿದ್ದಾರೆ. ಇದ್ರಿಂದ ಸಿಬ್ಬಂದಿ ಆಕ್ರೋಶಗೊಂಡು ಈ ರೀತಿ ಕೃತ್ಯ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರ್ತಿವೆ.

ಸದ್ಯಕ್ಕೆ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಸಿ.ಸಿ.ಟಿ.ವಿ ಕಾರ್ಯ ನಿರ್ವಹಿಸುತ್ತಿದೆ. ಈ ಕೃತ್ಯ ಯಾರು ಮಾಡಿದ್ದಾರೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಹೊರ ಬರಬೇಕಿದೆ. ಯಾರು ಏನೇ ಹೇಳಲಿ ಗ್ರಾಮಪಂಚಾಯ್ತಿ ಕಾರ್ಯಾಲಯಕ್ಕೆ ಈ ರೀತಿ ಅಗೌರವ ತೋರುವುದು ಎಷ್ಟರ ಮಟ್ಟಿಗೆ ಸರಿ ಅಲ್ವೇ?

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ

Edited By : Nirmala Aralikatti
PublicNext

PublicNext

03/10/2022 10:41 pm

Cinque Terre

17.79 K

Cinque Terre

1

ಸಂಬಂಧಿತ ಸುದ್ದಿ