ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರ್ ಟೇಕರ್ ಆಗಿ ಮನೆ ದೋಚಿದ ಖತರ್ನಾಕ್ ಲೇಡಿ

ಬೆಂಗಳೂರು: ವಯಸ್ಸಾದವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಜನ ಹುಡುಕ್ತಾ ಇದ್ರೆ ಎಚ್ಚರ. ಯಾಕಂದ್ರೆ ಕೇರದ ಟೇಕರ್ ಹೆಸ್ರಲ್ಲಿ ಮನೆಗೆ ಬರೋ ಇವ್ರು ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿ ಬಿಡ್ತಾರೆ.

ಕೇರ್ ಟೇಕರ್ ಕೆಲಸಕ್ಕೆ ಸೇರಿ ಲಕ್ಷಾಂತರ ನಗ ನಾಣ್ಯ ದೋಚಿ ಪರಾರಿಯಾಗಿದ್ದ ಖತರ್ನಾಕ್ ಲೇಡಿಯನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ರು ಬಂಧಿಸಿದ್ದಾರೆ. ಕೇರ್ ಟೇಕರ್ ಕೆಲಸಕ್ಕೆ ಇದ್ದ ಉಮಾದೇವಿ ಬಂಧಿತ ಆರೋಪಿಯಗಿದ್ದು, ಬಂಧಿತಳಿಂದ ಐದು ಲಕ್ಷ ಹಣ,230 ಗ್ರಾಂ ಚಿನ್ನದ ಒಡವೆ,750 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಸೀಜ್ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯಲ್ಲಿ ಮನೆಯಲ್ಲಿದ್ದ ವೃದ್ದರ ಆರೈಕೆಗೆ ಅಂತ ಉಮಾದೇವಿಯನ್ನ ನೇಮಕಮಾಡಿಕೊಂಡಿದ್ರು. ಸ್ವಲ್ಪ ದಿನದಲ್ಲಿ ಮನೆಯವರ ನಂಬಿಕೆ ಸಂಪಾದಿಸಿದ್ದ ಉಮಾದೇವಿ ಮನೆಯಲ್ಲಿ ಯಾವ ಯಾವ ವಸ್ತು ಎಲ್ಲಿದೆ ಅಂತ ನೋಡಿಕೊಂಡಿದ್ದ ಉಮಾದೇವಿ ಮನೆಯವರು ಇಲ್ಲದಿದ್ದಾಗ ನಗ ನಾಣ್ಯ ದೋಚಿ ಪರಾರಿಯಾಗಿದ್ಳು.

Edited By : Nirmala Aralikatti
Kshetra Samachara

Kshetra Samachara

27/09/2022 12:26 pm

Cinque Terre

2.75 K

Cinque Terre

0