ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾತ್ರೋರಾತ್ರಿ ಹಸು ಕದ್ದ ಖದೀಮರು, ವರಸೆ ಸಿಸಿ ಟಿವಿಯಲ್ಲಿ ಸೆರೆ

ಆನೇಕಲ್ : ಮನೆ ಮುಂದೆ ಕಟ್ಟಿ ಹಾಕಿದ್ದ ಐದು ಹಸುಗಳನ್ನು ರಾತ್ರಿ ವೇಳೆ ಮೂರು ಜನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಹುಸ್ಕೂರು ಸಮೀಪದ ಅವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳ್ಳತನವಾಗಿದ್ದು

ರಾಜಪ್ಪ ಎಂಬುವರಿಗೆ ಸೇರಿದ ರಾಸುಗಳು ಎಂದು ತಿಳಿದು ಬಂದಿದೆ.

ಮಧ್ಯರಾತ್ರಿ ಎರಡು ಮೂವತ್ತಕ್ಕೆ ರಾಜಪ್ಪ ಅವರ ಮನೆ ಆವರಣದಲ್ಲಿ ಐದು ಹಸುಗಳನ್ನ ಕಟ್ಟಾಕಲಾಗಿತ್ತು. ಈ ವೇಳೆ ಮೂರು ಜನ ಕಳ್ಳರು ಚಾಕು ಹಿಡಿದು ಬಂದು ಹಗ್ಗಗಳನ್ನ ಕಟ್ ಮಾಡಿ ಹಸುಗಳನ್ನು ಎಳೆದು ಹೋಗುತ್ತಿರುವ ದೃಶ್ಯಾವಳಿಗಳು ಮನೆ ಮುಂದೆ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಸಿಸಿ ಟಿವಿಯನ್ನು ಆಧಾರಿಸಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹಸುಗಳ ಮಾಲೀಕ ರಾಜಪ್ಪ ದೂರು ಸಲ್ಲಿಕೆ ಮಾಡಿದ್ದಾರೆ. ಸಿಸಿ ದೃಶ್ಯಾವಳಿಗಳು ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Nagesh Gaonkar
PublicNext

PublicNext

24/09/2022 09:13 pm

Cinque Terre

33.6 K

Cinque Terre

0