ಬೆಂಗಳೂರು: ಇತ್ತಿಚೇಗೆ ನಗರದಲ್ಲಿ ಹೆಚ್ಚಾಗ್ತಿರೋ ಮೊಬೈಲ್ ಫೋನ್ ಸ್ನಾಚ್ ಮತ್ತು ರಾಬರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಪೊಲೀಸ್ರು ಈ ಪ್ರಕರಣಗಳ ಕುರಿತು ವಿಶೇಷ ಕಾರ್ಯಾಚರಣೆ ನಡೆಸಿದ್ರು.
ಈ ವೇಳೆ ಮೊಬೈಲ್ ಸುಲಿಗೆ ಮಾಡ್ತಿದ್ದ ಅಯೂಬ್ ಅಹಮ್ಮದ್, ವಾಸಿಂ ಪಾಷಾ, ರೋಷನ್ ಪಾಷಾ, ಅಬ್ದುಲ್ ರೆಹೆಮಾನ್ ಎಂಬ ಐವರನ್ನ ಬಂಧಿಸಿ,ಬಂಧಿತರಿಂದ 40 ಲಕ್ಷ ರೂಪಾಯಿ ಮೌಲ್ಯದ 400 ಮೊಬೈಲ್ ಫೋನ್‌ಗಳನ್ನ ಸೀಜ್ ಮಾಡಲಾಗಿದೆ. ಬಂಧಿತರು ಕುಮಾರಸ್ವಾಮಿ ಲೇಔಟ್, ಜಯನಗರ, ಶಂಕರಪುರ, ಬಸವನಗುಡಿ, ಜೆಪಿ ನಗರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ರು.
PublicNext
23/09/2022 02:09 pm