ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಸಾದಹಳ್ಳಿ ಗ್ರಾಮದ ಕಲ್ಲುಕ್ವಾರಿ ಬಳಿ ನಿನ್ನೆ (ರವಿವಾರ) ಪಾರ್ಟಿ ಮಾಡುವಾಗ ಗಂಗಾಧರ್ (26) ಕಾಲು ಜಾರಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಗಂಗಾಧರ್ ಸಾದಳ್ಳಿಯ ಶ್ರೀರಾಮ್ ಗ್ರಾನೈಟ್ಸ್ ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡ್ತಿದ್ದು, ದುರಂತ ಅಂತ್ಯ ಕಂಡಿದ್ದಾನೆ. ನಿನ್ನೆ ಸಂಜೆ ದುರಂತ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಇಂದು ಶವ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸಹಜ ಸಾವು ಬಗ್ಗೆ ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ
PublicNext
19/09/2022 09:35 pm