ಬೆಂಗಳೂರು: ದೇವಸ್ಥಾನದ ಆವರಣದಲ್ಲಿ ಮಲಗುವ ವಿಚಾರಕ್ಕಾಗಿ ನಡೆದ ಭಿಕ್ಷುಕರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಕೊಲೆ ಆರೋಪಿಯನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಶಂಕರಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಪ್ರಕಾಶ್ ಬಂಧಿತ ಆರೋಪಿಯಾಗಿದ್ದಾನೆ. ಯಶವಂತಪುರದ ಪೈಪ್ ಲೈನ್‌ರಸ್ತೆಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನ ಹೊರಾಂಗಣದಲ್ಲಿ ಪ್ರಕಾಶ್ ಪ್ರತಿದಿನ ಮಲಗುತ್ತಿದ್ದ. ಸೆ.12ರಂದು ರಾತ್ರಿ ಪ್ರಕಾಶ್ ಮಲಗುವ ಜಾಗದಲ್ಲಿ ಶಂಕರಪ್ಪ ಮಲಗಿಕೊಂಡಿದ್ದ.
ಇದನ್ನು ಕಂಡು ಸಿಟ್ಟಿಗೆದ್ದ ಪ್ರಕಾಶ್ ದೊಣ್ಣೆಯಿಂದ ಹೊಡೆದು ಏಳಿಸಿದ್ದಾನೆ. ಹೊಟ್ಟೆ ಹಾಗೂ ಮುಖಕ್ಕೆ ಹೊಡೆದು ಕಾಲಿನಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಶಂಕರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೈ-ಕಾಲಿನಿಂದ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
PublicNext
19/09/2022 12:50 pm