ಬೆಂಗಳೂರು: ಅಲಯನ್ಸ್ ಯೂನಿವರ್ಸಿಟಿ ರಂಪಾಟ ಪ್ರಕರಣದಲ್ಲಿ A2 ಆರೋಪಿಯಾಗಿರುವ ಸ್ವರ್ಣಲತಾಗೆ ಹಿನ್ನಡೆಯಾಗಿದೆ ಇದರಿಂದ ಮತ್ತಷ್ಟು ದಿನ ಸ್ವರ್ಣಲತಾಗೆ ಅಜ್ಞಾತವಾಸ ಗತಿ ಎನ್ನಲಾಗುತ್ತಿದೆ.
ಜಾಮೀನಿಗಾಗಿ A2 ಸ್ವರ್ಣಲತಾ ಮತ್ತು A3 ರವಿ ಕುಮಾರ್ ಅರ್ಜಿಯನ್ನ ತಮ್ಮ ವಕೀಲರ ಮೂಲಕ ಆನೇಕಲ್ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಿನ್ನೆ A3 ರವಿಕುಮಾರ್‌ನನ್ನು ಅರೆಸ್ಟ್ ಮಾಡಿರುವ ಪೊಲೀಸರು ನ್ಯಾಯಾಲಯದ ಗಮನಕ್ಕೆ ಆನೇಕಲ್ ಪೊಲೀಸರು ತಂದಿದ್ದರು, ಹಾಗಾಗಿ ಸ್ವರ್ಣಲತಾ ಮತ್ತು ರವಿಕುಮಾರ್ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಹೀಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಸ್ವರ್ಣಲತಾ ವಕೀಲರ ಸಿದ್ಧತೆ ನಡೆಸಲಾಗಿದೆ ಅಂತ ಮೂಲಗಳಿಂದ ತಿಳಿದುಬಂದಿದೆ ಒಂದು ವೇಳೆ ಇಂದು ಅರ್ಜಿ ಸಲ್ಲಿಸಿದರೆ ಮುಂದಿನ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಅಲ್ಲಿವರಗೆ ಸ್ವರ್ಣಲತಾ ಶೋಧ ಕಾರ್ಯಾಚರಣೆ ಮುಂದುವರೆಯಲಿದೆ.
PublicNext
17/09/2022 09:51 pm