ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಹೆಚ್ಚಾದ ಹಫ್ತಾ ವಸೂಲಿ ದಂಧೆ

ಬೆಂಗಳೂರು: ನಗರದಲ್ಲಿ ವಸೂಲಿ ದಂಧೆ ಇನ್ನೂ ಕೂಡ ನಿಂತಿಲ್ಲ. ಕೇಳಿದಷ್ಟು ಹಫ್ತಾ ಕೊಡದಿದ್ದರೆ ಹೆಣ ಉರುಳಿಸುವುದಾಗಿ ರೌಡಿಯೊಬ್ಬ ಬೆದರಿಕೆ ಹಾಕಿದ್ದಾನೆ.

ಸೆಕ್ಯೂರಿಟಿ ಮನಿ ನೆಪದಲ್ಲಿ ಈ ವಸೂಲಿ ದಂಧೆ ನಡೆದಿದ್ದು, ಮಾರ್ಕೆಟ್‌ನಲ್ಲಿರುವ ವರ್ತಕನಿಗೆ ಧಮ್ಕಿ ಹಾಕಿದ ರೌಡಿಶೀಟರ್ ಪೀಟರ್ ಅಲಿಯಾಸ್‌ ಕುಳ್ಳ ಪೀಟರ್ ಅಲಿಯಾಸ್‌ ಜಾನ್ ಪೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಫ್ತಾ ಕೊಡಲಿಲ್ಲ ಅಂದ್ರೆ ಹೆಣ ಉರುಳುಸ್ತೀನಿ, ದೂರು ಕೊಟ್ಟರೆ ಹಲವು ಕೇಸ್‌ಗಳ ನಡುವೆ ಇದೂ ಮತ್ತೊಂದು ಕೇಸ್ ಆಗುತ್ತೆ ಅಷ್ಟೇ. ಮೂರು ಲಕ್ಷ ಕೊಡಬೇಕು ಅಷ್ಟೆ ಇಲ್ಲಾಂದ್ರೆ ಕಥೆ ಮುಗೀತು. ಕೊಡ್ಲಿಲ್ಲ ಅಂದ್ರೆ ಎತ್ತಾಕೊಂಡು ಹೋಗಿ ಖರಾಬಾಗಿ ಹೊಡೀತೀನಿ, ಮಾರ್ಕೆಟ್‌ನಲ್ಲಿ ಕೇಳು ಇಲ್ಲಾಂದರೆ ಬಂದು ಹುಡುಗರಿಂದ ಚುಚ್ಚಿಸ್ತೀನಿ ಎಂದು ಈತ ಫೋನ್‌ನಲ್ಲಿ ವ್ಯಾಪಾರಿಗೆ ಬೆದರಿಸಿದ್ದಾನೆ.

ಲಕ್ಷ ಲಕ್ಷ ದುಡಿಯುತ್ತೀಯ ಐದು ಲಕ್ಷ ಕೇಳಿದ್ದೇನೆ. ಮೂರು ಲಕ್ಷಕ್ಕೆ ಸೆಟ್ಲ್‌ಮೆಂಟ್ ಮಾಡು ಎಂದು ರೌಡಿ ಅವಾಜ್ ಹಾಕಿದ್ದಾರೆ. ಈ ವೇಳೆ ಗೋಗರೆಯುವ ಧ್ವನಿಯಲ್ಲಿ ವ್ಯಾಪರಿಗೆ, 'ವ್ಯಾಪಾರವೇ ಇಲ್ಲ ಹಣ ಎಲ್ಲಿಂದ ತರಲಿ' ಎಂದಿದ್ದಾರೆ.

ಮಾಹಿತಿ ಬಂದ ಹಿನ್ನೆಲೆಯಲ್ಲಿ ರೌಡಿಯನ್ನು ಹುಡುಕಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಇಂದು ಲಾಂಗ್ ಕೂಡ ಸೀಜ್ ಮಾಡಿದ್ದಾರೆ.

Edited By : Shivu K
PublicNext

PublicNext

14/09/2022 02:41 pm

Cinque Terre

30.47 K

Cinque Terre

1

ಸಂಬಂಧಿತ ಸುದ್ದಿ