ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಡ್ಡೆ ಹೈಕಳ ಫೆವರೇಟ್ ಆರ್ ಎಕ್ಸ್ ಬೈಕ್‌ಗೆ ಕಳ್ಳರ ಕಾಟ

ಬೆಂಗಳೂರು: ಆರ್‌ಎಕ್ಸ್..​ ಈ ಹೆಸ್ರು ಕೇಳಿದ್ರೆ ಹುಡುಗರೇ ಇರ್ಲಿ, ಹುಡುಗಿಯರೇ ಇರ್ಲಿ. ಈ ಬೈಕ್ ಸೌಂಡ್ ಕೇಳಿದ್ರೆ ತಿರುಗಿ ನೋಡ್ತಾರೆ. 90s ಕಾಲದ ಬೈಕ್ ಮಾನಿಫ್ಯಾಕ್ಚರ್ ನಿಂತ್ರು ಇದ್ರ ಮೇಲಿನ‌‌ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಆರ್ ಎಕ್ಸ್ ಬೈಕ್ ಕಳ್ಳರು ನಗರದಲ್ಲಿ ಹುಟ್ಟಿಕೊಂಡಿದ್ದಾರೆ. ಆರ್​ ಎಕ್ಸ್​ ಬೈಕ್​ ಎಷ್ಟು ಹಳೆಯದಾಗಿರುತ್ತೋ ಅಷ್ಟು ಬೆಲೆ ಜಾಸ್ತಿ. ಕಾರಣ ಇಷ್ಟೆ ಆರ್​ ಎಕ್ಸ್​ಗೆ ಇರುವ ಕ್ರೇಜ್​ ಅದು. ಈ ಕ್ರೇಜ್​ ಈಗ ಬೈಕ್​ ಕಳ್ಳತನಕ್ಕೆ ಕಾರಣವಾಗುತ್ತಿದೆ.

ಬೆಂಗಳೂರಿನಲ್ಲಿ ಮನೆಗಳ ಪಾರ್ಕಿಂಗ್​ನಲ್ಲಿ ನಿಲ್ಲಿಸಿರುವ ಆರ್​ ಎಕ್ಸ್​ ಬೈಕ್​ಗಳನ್ನೇ ಟಾರ್ಗೆಟ್​ ಮಾಡಿ ಕಳ್ಳರು ಕಳವು ಮಾಡ್ತಿದ್ದಾರೆ. ಇಂತದೊಂದು ಗ್ಯಾಂಗ್​ ಈಗ ನಗರದಲ್ಲಿ ಆ್ಯಕ್ಟೀವ್​ ಆಗಿದೆ. ಹೌದು, ಸದ್ಯ ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆರ್ ಎಕ್ಸ್ ಬೈಕ್‌ ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದು ಆರೋಪಿಯೊಬ್ಬ ಪರಾರಿಯಾಗಿದ್ದಾನೆ. ಬೈಕ್​ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೀಲಿಂಗ್​ ಮಾಡುವ ಚಟವಿರುವವರು ಹೆಚ್ಚಾಗಿ ಈ ಬೈಕ್​ ಕಳವು ಮಾಡೋಕೆ ಮುಂದಾಗ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹಳೇ ಆರ್​ ಎಕ್ಸ್​ ಬೈಕ್​ಗಳನ್ನು ಖರೀದಿಸಿ ಅದನ್ನು ಗ್ಯಾರೇಜ್​ನಲ್ಲಿ ಬಿಟ್ಟು 20 ಸಾವಿರದಷ್ಟು ಖರ್ಚು ಮಾಡಿ, ಬೈಕ್​ ರೆಡಿ ಮಾಡಿಸಿದ್ರೆ, ಮಾರುಕಟ್ಟೆಯಲ್ಲಿ ಆ ಬೈಕ್​ ಬೆಲೆ 1 ಲಕ್ಷ ದಿಂದ 1.5 ಲಕ್ಷದವರೆಗೆ ಏರುತ್ತದೆ. ಅದರಲ್ಲೂ ಆರ್​ ಎಕ್ಸ್ 100 ಹಾಗೂ 135 ಸಿಸಿ ಬೈಕ್​ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿಯೇ ಈ ಬೈಕ್​ಗಳನ್ನು ಕಳವು ಮಾಡುವ ಪುಂಡರು ಮೊದಲಿಗೆ ಅವುಗಳನ್ನು ವೀಲಿಂಗ್​ ಮಾಡಲು ಬಳಸಿಕೊಂಡು, ನಂತರ ಅದನ್ನು ಲಕ್ಷಾಂತರ ರೂಪಾಯಿಗೆ ಮಾರಿ ಬಿಡುತ್ತಾರೆ. ಈ ಹಳೆಯ ಆರ್​ ಎಕ್ಸ್​ ಬೈಕ್​ಗಳಲ್ಲಿ ದಾಖಲೆಗಳೇ ಇರೋದಿಲ್ಲ. ಹೀಗಾಗಿ ಈ ಬೈಕ್​ಗಳನ್ನ ಕಳವು ಮಾಡಿದ್ರೆ ಮಾರಾಟವೂ ಸುಲಭ ಹಾಗೂ ದೂರು ಕೊಟ್ರೂ ಬೈಕ್‌ ಪತ್ತೆ ಮಾಡುವುದು ಪೊಲೀಸ್ರಿಗೆ ದೊಡ್ಡ ಸವಾಲಾಗಿರುತ್ತದೆ.

Edited By : Nagesh Gaonkar
PublicNext

PublicNext

13/09/2022 09:33 pm

Cinque Terre

51.34 K

Cinque Terre

0

ಸಂಬಂಧಿತ ಸುದ್ದಿ