ಬೆಂಗಳೂರು:: ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದ, ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಬ್ಯಾಂಕ್ ಹಣವನ್ನ ಬೇಕಾದವರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿ ದಿವಾಳಿಗೆ ಕಾರಣವಾಗಿದ್ದ.
ಸದ್ಯ ಆತನ ಮನೆ, ಕಚೇರಿ ಹಾಗೂ ಆತನ ಸ್ನೇಹಿತರ ಮನೆ ಸೇರಿಂದತೆ 14 ಕಡೆಗಳಲ್ಲಿ ಏಕಕಾಲದಲ್ಲಿ ಸಿಸಿಬಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದೆ. ರಾಘವೇಂದ್ರ ಕೋ-ಆಪರೇಟಿವ್, ವಸಿಷ್ಠ ಕೋ-ಆಪರೇಟಿವ್ ಹೀಗೆ ಹತ್ತು ಹಲವು ಕೋ-ಆಪರೇಟಿವ್ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಸಾಲು ಸಾಲು ನಾಮವನ್ನಿಟ್ಟು ಇದೀಗ ಕೈಕಟ್ಟಿ ಕುಳಿತಿವೆ.
ಇಂತಹ ವಂಚನೆ ಬ್ಯಾಂಕ್‌ಗಳ ಪಟ್ಟಿಗೆ ಇದೀಗ ಶುಶೃತಿ ಕೋ-ಆಪರೇಟಿವ್ ಬ್ಯಾಂಕ್ ಕೂಡ ಸೇರ್ಪಡೆಯಾಗಿದೆ. 1998ರಲ್ಲೇ ಸ್ಥಾಪನೆಯಾಗಿದ್ದ, ಶುಶೃತಿ ಬ್ಯಾಂಕ್‌ಗೆ ಅಧ್ಯಕ್ಷನಾಗಿದ್ದ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಆಡಳಿತ ಮಂಡಳಿಯು ಹೆಚ್ಚಿನ ಹಣ ಹೂಡಿದರೆ ಶೇ.8 ರಿಂದ 10 ರಷ್ಟು ಬಡ್ಡಿ ಹಣ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಕೊಂಡಿದ್ದ. ಬ್ಯಾಂಕ್ ಕಾಲಕ್ರಮೇಣ ಹೂಡಿಕೆ ಹಣ ನೀಡದೆ ವಂಚಿಸುತಿತ್ತು.
ಪರಿಚಯಸ್ಥರಿಗೆ ಯಾವುದೇ ದಾಖಲಾತಿ ಪಡೆದುಕೊಳ್ಳದೆ ಲಕ್ಷಾಂತರ ರೂಪಾಯಿ ಸಾಲ ನೀಡುತ್ತಿದ್ದ ಆರೋಪಿಗಳು ಈವರೆಗೂ ಅಸಲು ಹಾಗೂ ಬಡ್ಡಿ ಹಣ ಕಟ್ಟಿರಲಿಲ್ಲ. ಸುಮಾರು 100 ಕೋಟಿ ಅಧಿಕ ಹಣ ವಂಚಿಸಿರುವುದಾಗಿ ಗೊತ್ತಾಗಿದೆ. ಇದೇ ಕಾರಣಕ್ಕೆ ಬ್ಯಾಂಕು ದಿವಾಳಿ ಎದ್ದು ವಂಚನೆಗೊಳಗಾದ ಗ್ರಾಹಕರೇ ರಾಜಗೋಪಾಲನಗರ, ಸಂಜಯ್ ನಗರ,ವಿಲ್ಸನ್ ಗಾರ್ಡನ್, ಹಲಸೂರು ಗೇಟ್ ಠಾಣೆಯಲ್ಲಿ ದೂರನ್ನ ನೀಡಿದ್ದರು.
ಅಧ್ಯಕ್ಷ ಶ್ರೀನಿವಾಸ ಮೂರ್ತಿ ಈ ಎಲ್ಲಾ ವಂಚನೆಗೂ ಮಾಸ್ಟರ್ ಮೈಂಡ್. ತನಗೆ ಪರಿಚಿತವಾದ ವ್ಯಕ್ತಿಗಳಾದ ವೇಣು, ಸುರೇಶ, ಮಂಜುನಾಥ್ ಸೇರಿದಂತೆ ಒಟ್ಟು 11 ಮಂದಿಗೆ 100 ಕೋಟಿಯಷ್ಟು ಸಾಲವನ್ನ ಕೊಡಿಸಿದ್ದಾನೆ. ಯಾವಾಗ ಸಾಲ ಮರುಪಾವತಿಯಾಗಿಲ್ವೋ ಆಗಲೇ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟ ಠೇವಣಿದಾರರು ಬಡ್ಡಿ ಹಣ ಸಿಗದೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಕೇಸು ಸಿಸಿಬಿ ತೆಕ್ಕೆಗೆ 11 ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
PublicNext
12/10/2022 07:51 pm