ಬೆಂಗಳೂರು: ಯಾರದ್ದೋ ಲವ್ ಸ್ಟೋರಿ, ಇನ್ಯಾರ ಮೇಲೊ ದ್ವೇಷಕ್ಕೆ ರಸ್ತೆಯಲ್ಲಿ ನಿಂತಿದ್ದ ಅಪರಿಚಿತನ ಮೇಲೆ ಮಾರಾಕಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಮಂಜೇಶ್ ಅಂಡ್ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಪಾಲಾಗಿದ್ದಾನೆ. ದಸರಾ ಮೆರವಣಿಗೆ ವೇಳೆ ನಡೆದಿದ್ದ ಘಟನೆಯ ಅಸಲಿ ಸತ್ಯವನ್ನು ಮಾಗಡಿ ರಸ್ತೆ ಪೊಲೀಸ್ರು ಹೊರಹಾಕಿದ್ದಾರೆ.
ಹಲ್ಲೆ ಮಾಡಿದ ಮಂಜೇಶ್‌ಗೆ ಯುವತಿಯೋರ್ವಳ ಮೇಲೆ ಪ್ರೀತಿ ಇತ್ತು. ಆದ್ರೆ ಆ ಯುವತಿ ನಿತೀನ್ ಎಂಬಾತನ ಮೇಲೆ ಪ್ರೀತಿ ಮಾಡ್ತಿದ್ಳು. ಹೀಗಾಗಿ ತಾನು ಇಷ್ಟ ಪಟ್ಟ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್ ಆತನನ್ನು ಮಾತನಾಡಿಸೋ ನೆಪದಲ್ಲಿ ಕರೆದು ಹಲ್ಲೆ ಮಾಡಲು ತಂತ್ರ ನಡೆಸಿದ್ದ.
ಈ ವೇಳೆ ನಿತೀನ್ ತನ್ನ ಸಹೋದರನ ಜೊತೆ ಬರೋದಾಗಿ ಹೇಳಿದ್ದ. ನಿತಿನ್ ಸಿಗೋದಾಗಿ ಹೇಳಿದಾಗ ಟೂಲ್ಸ್ ಸಮೇತ ಎಂಟ್ರಿ ಕೊಟ್ಟ ಮಂಜೇಶ್ ಈ ವೇಳೆ ತನ್ನ ಗೆಳೆಯನ ಜೊತೆ ನಿಂತಿದ್ದ ದೀಪುವನ್ನ ನೋಡಿ ನಿತಿನ್ ಅಂತ ದೀಪು ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಿದ್ರು. ದಾಳಿಗೂ ಮುನ್ನ ಎಲ್ಲೋ ಪ್ರತಾಪ್ ಅಂತ ಕೇಳಿದ್ರು ಇದಕ್ಕೆ ದೀಪು ನನಗೆ ಗೊತ್ತಿಲ್ಲ ಯಾರೂ ನೀವು ಅಂತ ಕೇಳಿದ್ದ. ಆದ್ರೆ ಆತನ ಮಾತು ಕೇಳದೇ ಮನಬಂದಂತೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ರು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ಮಂಜೇಶ ನ ಬಂಧಿಸಿದ್ದು ಉಳಿದವರಿಗೆ ಬಲೆ ಬೀಸಿದ್ದಾರೆ.
PublicNext
08/10/2022 06:15 pm