ಬೆಂಗಳೂರು: ಗೋಪುರದ ಮೇಲೆ ಪಾಕಿಸ್ತಾನದ ಬಾವುಟವನ್ನ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡು ರಾಷ್ಟ್ರದ್ರೋಹವೆಸಗಿದ ಹೊರರಾಜ್ಯದ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿರೋ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬಾಣಾವರದಲ್ಲಿ ನಡೆದಿದೆ.
ಚಿಕ್ಕಬಾಣಾವರದ ಪಿಜಿಯಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಗುಲಾಮ್ ಮುಸ್ತಾಫ್ (19) ಎಂಬಾತನೇ ಬಂಧಿತ ವಿದ್ಯಾರ್ಥಿ. ಈತ ಲಾಲ್‌ಬಾಗ್‌ನ ಕೆಂಪೇಗೌಡ ಗೋಪುರದ ಮೇಲೆ ಪಾಕಿಸ್ತಾನದ ಬಾವುಟ ಬರುವಂತೆ ಪೋಟೋ ಎಡಿಟ್ ಮಾಡಿ ಸ್ಟೇಟಸ್ನಲ್ಲಿ ಹರಿಬಿಟ್ಟಿದ್ದಾನೆ. ಪೋಟೋ ವೈರಲ್ ಆಗುತ್ತಿದ್ದಂತೆ ಈತನ ಸ್ನೇಹಿತರು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿಯನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಸ್ಥಳಕ್ಕಾಮಿಸಿದ ಸೋಲದೇವನಹಳ್ಳಿ ಪೊಲೀಸ್ರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಘಟನೆ ಕುರಿತಂತೆ ಪಾಕಿಸ್ತಾನ ಧ್ವಜ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವಿದ್ಯಾರ್ಥಿ ಮೇಲೆ 153A ಅಡಿ ಕೋಮು ಸಾಮರಸ್ಯ ಹಾಳು ಮಾಡಿದ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.
PublicNext
23/09/2022 05:40 pm