ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡನಹಳ್ಳಿ ಗ್ರಾಮದ ಇಕೆ ಲೇಔಟ್‌ನಲ್ಲಿ ದಾಕ್ಷಾಯಣಮ್ಮ ಎಂಬುವರ ಮನೆಗಳ್ಳತನವಾಗಿತ್ತು. ಹುಸ್ಕೂರು ರಸ್ತೆಯಲ್ಲಿ ನಡೆದ ಅಟೆನ್ಷನ್ ಡೈವರ್ಷನ್ ಪ್ರಕರಣ ದಾಖಲಿಸಿಕೊಂಡ ಠಾಣಾ ಸಿಪಿಐ ಮಂಜುನಾಥ್ ತಂಡವು ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಟವರ್ ಲೊಕೇಶನ್ ಮೂಲಕ ಅಂತರರಾಜ್ಯದ ಕಳ್ಳರನ್ನ ಪತ್ತೆ ಹಚ್ಚಿದ್ದಾರೆ.
ತಮಿಳುನಾಡು ಮೂಲದ ಅಭಿಷೇಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಒಟ್ಟು 5 ಕಳ್ಳತನ ಕೃತ್ಯ ಎಸಗಿದ್ದು, ಆತನಿಂದ 110 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.
PublicNext
20/09/2022 10:07 pm